ADVERTISEMENT

ಬ್ರಹ್ಮಾವರ| ಆಪರೇಷನ್‌ ಸಿಂಧೂರ: ಗಿಡ ನೆಟ್ಟು ಬೆಂಬಲ

​ಪ್ರಜಾವಾಣಿ ವಾರ್ತೆ
Published 20 ಮೇ 2025, 12:38 IST
Last Updated 20 ಮೇ 2025, 12:38 IST
ಬ್ರಹ್ಮಾವರ ಜಯಂಟ್ಸ್ ಗ್ರೂಪ್ ವತಿಯಿಂದ ಮಿಷನ್ ಆಸ್ಪತ್ರೆ‌ ವಠಾರದಲ್ಲಿ ಸಿಂಧೂರ ಎಂಬ ವಿಶೇಷ ಗಿಡಗಳನ್ನು ನೆಡಲಾಯಿತು
ಬ್ರಹ್ಮಾವರ ಜಯಂಟ್ಸ್ ಗ್ರೂಪ್ ವತಿಯಿಂದ ಮಿಷನ್ ಆಸ್ಪತ್ರೆ‌ ವಠಾರದಲ್ಲಿ ಸಿಂಧೂರ ಎಂಬ ವಿಶೇಷ ಗಿಡಗಳನ್ನು ನೆಡಲಾಯಿತು   

ಬ್ರಹ್ಮಾವರ: ‘ಆಪರೇಷನ್ ಸಿಂಧೂರ’ ಬೆಂಬಲಿಸಿ ಸೈನಿಕರಿಗೆ ಸ್ಥೈರ್ಯ ನೀಡಲು ಮತ್ತು ಪುಲ್ವಾಮಾ ದಾಳಿಯಲ್ಲಿ ಹತರಾದವರಿಗೆ ಸಂತಾಪ ಸೂಚಿಸಲು ಬ್ರಹ್ಮಾವರ ಜಯಂಟ್ಸ್ ಗ್ರೂಪ್ ವತಿಯಿಂದ ಮಿಷನ್ ಆಸ್ಪತ್ರೆ ವಠಾರದಲ್ಲಿ ಸಿಂಧೂರ ಎಂಬ ವಿಶೇಷ ಗಿಡಗಳನ್ನು ನೆಡಲಾಯಿತು.

ಜಯಂಟ್ಸ್‌ ಗ್ರೂಪ್‌ ಮಾಜಿ ಅಧ್ಯಕ್ಷ ಮಧುಸೂಧನ ಹೇರೂರು ಮಾತನಾಡಿ, ಮಹಿಳೆಯರ ಗೌರವ ರಕ್ಷಣೆಯ ಶಪಥ, ಮಾಂಗಲ್ಯ ಸಮರ್ಪಣೆ, ಪ್ರೀತಿ ಬಾಂಧವ್ಯದ ಲಾಂಛನ ಸಿಂಧೂರ. ನಮ್ಮ ಮಹಿಳೆಯರ ಸಿಂಧೂರ ಅಳಿಸಿದ್ದಕ್ಕೆ ಪ್ರತಿಯಾಗಿ, ನಮ್ಮ ಸೇನೆಯ ಪರಾಕ್ರಮ, ಪ್ರತೀಕಾರ, ತ್ಯಾಗ, ನ್ಯಾಯಕ್ಕೆ ಈ ಗಿಡ ಸಾಕ್ಷಿ. ಮುಂದಿನ ದಿನಗಳಲ್ಲಿ ವಿವಿಧ ಕಡೆ ಈ ಗಿಡಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ ಎಂದರು.

ಮಿಷನ್ ಆಸ್ಪತ್ರೆ ನಿರ್ದೇಶಕ ಡಾ.ಸುಶೀಲ್ ಜತ್ತನ್ನ, ದಿನಕರ ಅಮೀನ್, ಜಿಲ್ಲಾ ಸರ್ಜನ್ ಡಾ.ಅಶೋಕ, ಜಯಂಟ್ಸ್ ಪದಾಧಿಕಾರಿಗಳು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.