ADVERTISEMENT

Operation sindoor: ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 8 ಮೇ 2025, 11:25 IST
Last Updated 8 ಮೇ 2025, 11:25 IST
ಅಪರೇಷನ್‌ ಸಿಂಧೂರ ಯಶಸ್ವಿ ಕಾರ್ಯಾಚರಣೆ ಪ್ರಯುಕ್ತ ಕೋಟ ಅಮೃತೇಶ್ವರಿ ದೇವಸ್ತಾನದಲ್ಲಿ ವಿಶೇಷ ಪೂಜೆ ನಡೆಯಿತು
ಅಪರೇಷನ್‌ ಸಿಂಧೂರ ಯಶಸ್ವಿ ಕಾರ್ಯಾಚರಣೆ ಪ್ರಯುಕ್ತ ಕೋಟ ಅಮೃತೇಶ್ವರಿ ದೇವಸ್ತಾನದಲ್ಲಿ ವಿಶೇಷ ಪೂಜೆ ನಡೆಯಿತು   

ಕೋಟ(ಬ್ರಹ್ಮಾವರ): ‘ಅಪರೇಷನ್‌ ಸಿಂಧೂರ’ ಯಶಸ್ವಿ ಕಾರ್ಯಾಚರಣೆ ಪ್ರಯುಕ್ತ ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.

ರಾಜ್ಯ ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಅವರ ಸೂಚನೆಯಂತೆ ರಾಜ್ಯದ ಎಲ್ಲ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ಹಾಗೂ ಯೋಧರಿಗೆ ಒಳಿತಾಗಲಿ ಎಂದು ಪ್ರಾರ್ಥನೆ ಮಾಡಿ, ವಿಶೇಷ ಪೂಜೆ ಮಾಡಲಾಯಿತು.

ಭಾರತದ ಯಾರೊಬ್ಬ ಸೈನಿಕನ ಒಂದು ತೊಟ್ಟು ರಕ್ತ ಕೂಡ ಚೆಲ್ಲದಿರಲಿ, ನಮ್ಮ ಸೈನಿಕರೆಲ್ಲಾ ಕ್ಷೇಮವಾಗಿರಲಿ ಎಂದು ಹಲವು ಮಕ್ಕಳು ತಾಯಿ ಕೋಟ ಅಮೃತೇಶ್ವರಿ ಅಮ್ಮನಲ್ಲಿ ಪ್ರಾರ್ಥನೆ ಸಲ್ಲಿಸಿದರು.

ADVERTISEMENT

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ ಕುಂದರ್, ಸದಸ್ಯರಾದ ಸುಬ್ರಾಯ ಜೋಗಿ (ಅರ್ಚಕ ಪ್ರತಿನಿಧಿ), ಚಂದ್ರ ಆಚಾರ್ ಕೋಟ, ಶಿವ ಪೂಜಾರಿ ಮಣ್ಣೂರು, ಗಣೇಶ ಕೆ ನೆಲ್ಲಿಬೆಟ್ಟು, ಸುಭಾಶ್‌ ಶೆಟ್ಟಿ ಗಿಳಿಯಾರು, ಸುಧಾ ಎ ಪೂಜಾರಿ, ಜ್ಯೋತಿ ದೇವದಾಸ ಕಾಂಚನ್, ರತನ್ ಐತಾಳ ಕೋಟ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.