ಬ್ರಹ್ಮಾವರ: ಘಟ್ಟ ಪ್ರದೇಶದಲ್ಲಿ ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಗುರುವಾರ ಸೀತಾ ಮತ್ತು ಮಡಿಸಾಲು ನದಿಗಳು ಉಕ್ಕಿ ಹರಿದು, ಅನೇಕ ಮನೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಳಿಸಿತು.
ಮಡಿ ಕುಕ್ಜೆಹಳ್ಳಿ, ಹೇರೂರು ಉಗ್ಗೇಲ್ ಬೆಟ್ಟು, ಆರೂರು ಬೆಳ್ಮಾರು, ಉಪ್ಪೂರು ಜಾತಬೆಟ್ಟು ಸಂಪರ್ಕ ರಸ್ತೆಗಳ ಮೇಲೆ ನೀರು ತುಂಬಿದ್ದರಿಂದ ಸಂಚಾರಕ್ಕೆ ಅಡ್ಡಿ ಮಾಡಿತ್ತು. ಉಪ್ಪೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಪ್ರವಾಹದಿಂದ ಜಲಾವೃತಗೊಂಡಿತ್ತು.
ಸೀತಾ ನದಿ ಉಕ್ಕಿ ಹರಿದು ನೀಲಾವರ, ಬಾವಲಿಕುದ್ರುವಿನಲ್ಲಿ ಹಲವು ಮನೆಗಳು ಜಲಾವೃತಗೊಂಡಿವೆ. ಬಾರ್ಕೂರು, ಬಂಡೀಮಠ, ಕಚ್ಚೂರು, ಹೊಸಾಳದಲ್ಲೂ ನೆರೆ ಬಂದು ಮಾಲ್ತೀದೇವಿ ದೇವಸ್ಥಾನದ ಆಸುಪಾಸು ಅನೇಕ ಮನೆಗಳಿಗೆ ನೀರು ನುಗ್ಗಿವೆ. ನೆರೆ ಪೀಡಿತ ಪ್ರದೇಶಗಳಿಗೆ ಬ್ರಹ್ಮಾವರ ತಹಶೀಲ್ದಾರ್ ಸಹಿತ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರು.
ಕೋಟದ ಮೂಡುಗಿಳಿಯಾರು, ಅಚ್ಲಾಡಿ, ಹಂದಟ್ಟು, ಸಾಲಿಗ್ರಾಮದ ಅನೇಕ ಕಡೆ ನೆರೆ ನೀರಿನಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.