
ಉಡುಪಿ: ಪೇಜಾವರ ಮಠದ ಕೀರ್ತಿಶೇಷ ವಿಶ್ವೇಶತೀರ್ಥ ಶ್ರೀಗಳ ದ್ವಿತೀಯ ಆರಾಧನೋತ್ಸವದ ಅಂಗವಾಗಿ ಪೇಜಾವರ ಮಠದಲ್ಲಿ ವಿಶೇಷ ಆಚರಣೆ ಹಾಗೂ ಸಂಸ್ಮರಣೆ ನೆರವೇರಿತು.
ದಿವಾನರಾದ ಎಂ.ರಘುರಾಮಾಚಾರ್ಯ, ಸಿಇಒ ಸುಬ್ರಹ್ಮಣ್ಯ ಭಟ್, ವ್ಯವಸ್ಥಾಪಕ ಇಂದುಶೇಖರ ಹೆಗಡೆ, ಎಸ್.ವಿ.ಭಟ್, ರಾಮಚಂದ್ರ ಉಪಾಧ್ಯಾಯ, ಕೊಟ್ಟಾರಿ ಸಂತೋಷ್ ಸಹಕರಿಸಿದರು. ಹಂಡೆದಾಸ ಪ್ರತಿಷ್ಠಾನದಿಂದ ಉದಯಾಸ್ತಮಾನ ಭಜನೆ ನಡೆಯಿತು.
ಕುಕ್ಕಿಕಟ್ಟೆಯಲ್ಲಿರುವ ಪೇಜಾವರ ಮಠದ ಅಧೀನದ ಕೃಷ್ಣ ಬಾಲನಿಕೇತನದಲ್ಲಿ ಶ್ರೀಗಳ ಆರಾಧನೋತ್ಸವ ನಡೆಯಿತು. ಆಶ್ರಮದ ಮಕ್ಕಳು ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಂಗಳರಾತಿ ಬೆಳಗಿ, ಸ್ತೋತ್ರ ಹಾಗೂ ಭಗವದ್ಗೀತೆ ಪಠಿಸಿದರು.
ಮಠದ ದಿವಾನರಾದ ಎಂ.ರಘುರಾಮಾಚಾರ್ಯ, ಬಾಲನಿಕೇತನದ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ವ್ಯವಸ್ಥಾಪಕರು ಇದ್ದರು. ಉಡುಪಿ ವಿದ್ಯೋದಯ ಶಾಲೆ ಮತ್ತು ಕಾಲೇಜಿನಲ್ಲಿ ಸಂಸ್ಮರಣೆ ನಡೆಯಿತು. ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಾಮೂಹಿಕ ಭೋಜನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಸ್ಥೆಯ ಆಡಳಿತ ಮಂಡಳಿ ಪ್ರಮುಖರಾದ ನಾಗರಾಜ ಬಲ್ಲಾಳ್, ಕೆ.ಗಣೇಶ್ ರಾವ್, ಪದ್ಮರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.