ADVERTISEMENT

ಬೋಟ್ ಅವಘಡ: 6 ಮೀನುಗಾರರ ರಕ್ಷಣೆ

ಮಲ್ಪೆ ಬಂದರು ಸಮೀಪದಲ್ಲಿ ಬಂಡೆಗೆ ಡಿಕ್ಕಿ ಹೊಡೆದ ಬೋಟ್‌

​ಪ್ರಜಾವಾಣಿ ವಾರ್ತೆ
Published 20 ಮೇ 2020, 14:02 IST
Last Updated 20 ಮೇ 2020, 14:02 IST

ಉಡುಪಿ: ಮೀನುಗಾರಿಕೆ ಮುಗಿಸಿ ಮಲ್ಪೆ ಬಂದರಿಗೆ ವಾಪಾಸಾಗುತ್ತಿದ್ದ ಬೋಟ್‌ ಬಂಡೆಗೆ ಡಿಕ್ಕಿಹೊಡೆದು ಮುಳುಗಿದೆ. ಬೋಟ್‌ನಲ್ಲಿದ್ದ 6 ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ರೇಷ್ಮಾ ಖಾರ್ವಿ ಅವರಿಗೆ ಸೇರಿದ ಸ್ವರ್ಣರಾಜ್‌ ಎಂಬ ಬೋಟ್‌ ಮೇ 14ರಂದು ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೇ 19ರಂದು ನಸುಕಿನ ವೇಳೆ ಮರಳುವಾಗ ಬೋಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸ್ಟೇರಿಂಗ್ ಲಾಕ್‌ ಆಗಿ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿ ಹೊಡೆದಿದೆ.

ಸುದ್ದಿ ತಿಳಿದ ಸಮೀಪದಲ್ಲಿದ್ದ ಮೀನುಗಾರರು ದೋಣಿಯಲ್ಲಿ ತೆರಳಿ ಬೋಟ್‌ನಲ್ಲಿದ್ದ ಮೀನುಗಾರರನ್ನು ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ. ಲಕ್ಷಾಂತರ ಮೌಲ್ಯದ ಮೀನು, ಬಲೆ, ಡೀಸೆಲ್‌ ಸಮುದ್ರದ ಪಾಲಾಗಿದೆ.

ADVERTISEMENT

ಒಟ್ಟು ₹ 80 ಲಕ್ಷ ನಷ್ಟ ಉಂಟಾಗಿದೆ ಎಂದು ಬೋಟ್‌ ಮಾಲೀಕರು ತಿಳಿಸಿರುವುದಾಗಿ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಗಣೇಶ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.