ADVERTISEMENT

ವೈಭವದ ಮಕರ ಸಂಕ್ರಮಣ ತ್ರಿರಥೋತ್ಸವ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 10:22 IST
Last Updated 15 ಜನವರಿ 2020, 10:22 IST
ಮಕರ ಸಂಕ್ರಮಣದ ದಿನವಾದ ಮಂಗಳವಾರ ಉಡುಪಿಯ ಕೃಷ್ಣಮಠದ ರಥಬೀದಿಯಲ್ಲಿ ವೈಭವದ ತ್ರಿರಥೋತ್ಸವ ನೆರವೇರಿತು.ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ
ಮಕರ ಸಂಕ್ರಮಣದ ದಿನವಾದ ಮಂಗಳವಾರ ಉಡುಪಿಯ ಕೃಷ್ಣಮಠದ ರಥಬೀದಿಯಲ್ಲಿ ವೈಭವದ ತ್ರಿರಥೋತ್ಸವ ನೆರವೇರಿತು.ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ   

ಉಡುಪಿ: ಕೃಷ್ಣಮಠದ ರಥಬೀದಿಯಲ್ಲಿ ಮಂಗಳವಾರ ವೈಭವದ ಮಕರ ಸಂಕ್ರಮಣ ತ್ರಿರಥೋತ್ಸವ ನೆರವೇರಿತು. ಸಾವಿರಾರು ಭಕ್ತರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ಬಾಣ ಬಿರುಸಿನ ಚಿತ್ತಾರ ಕಣ್ಮನ ಸೆಳೆಯಿತು.

ಮಕರ ಸಂಕ್ರಮಣಕ್ಕೆ ಪೂರ್ವಭಾವಿಯಾಗಿ ಆರಂಭವಾಗುವ ಸಪ್ತೋತ್ಸವದ ಸಂದರ್ಭ ಪ್ರತಿದಿನ ಕೃಷ್ಣದೇವರಿಗೆ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನೆರವೇರುತ್ತದೆ. ಮಕರ ಸಂಕ್ರಮಣದ ಮುನ್ನದಿನ ಮೂರು ರಥೋತ್ಸವ ನಡೆಯುವುದು ವಿಶೇಷ.

ಅನಂತೇಶ್ವರ, ಚಂದ್ರಮೌಳೇಶ್ವರ ಹಾಗೂ ಕೃಷ್ಣ ರಥೋತ್ವವದಲ್ಲಿ ವಿರಾಜಮಾನರಾಗಿ ಸಾಗುವುದನ್ನು ನೋಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಅಷ್ಠಮಠಗಳ ಯತಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.