ADVERTISEMENT

ದೇವಸ್ಥಾನದ ಹುಂಡಿ ಕಳವು: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 12:49 IST
Last Updated 4 ಜೂನ್ 2025, 12:49 IST
ಸಲ್ಮಾನ್‌
ಸಲ್ಮಾನ್‌   

ಹೆಬ್ರಿ: ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ದೇವಸ್ಥಾನದಲ್ಲಿ ಈಚೆಗೆ ಹುಂಡಿ ಹಾಗೂ ಕಲ್ಕುಡ, ಕಲ್ಲುರ್ಟಿ ದೈವಗಳ ಕಾಣಿಕೆ ಡಬ್ಬಿಯ ಹಣ ಕದ್ದ ಆರೋಪಿ ಸಲ್ಮಾನ್‌ನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಸಲ್ಮಾನ್‌ ದೇವಸ್ಥಾನದಿಂದ 15 ದಿನದಲ್ಲಿ 2 ಸಲ ಕಳವು ಮಾಡಿದ್ದ. ದೇವಸ್ಥಾನದ ಪ್ರಧಾನ ಅರ್ಚಕ, ಧರ್ಮಾಧಿಕಾರಿ ಸುಕುಮಾರ ಮೋಹನ್ ಮೇ 30ರಂದು ನಡೆದ ಕಲ್ಲುರ್ಟಿ ದರ್ಶನ, ಕೊರಗಜ್ಜನ ಹರಕೆಯ ಕೋಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಕೊರಗಜ್ಜ ದೈವ ‘9 ದಿನಗಳ ಒಳಗೆ ಕಳವು ಮಾಡಿದವನ ಹೆಡೆಮುರಿ ಕಟ್ಟುವೆ’ ಎಂದು ಅಭಯ ನೀಡಿತ್ತು. 

ದೈವ ನುಡಿದಂತೆ ಕಳವು ಮಾಡಿದ ವ್ಯಕ್ತಿಯ ಗುರುತು ಪತ್ತೆಯಾಗಿ ಗ್ರಾಮಸ್ಥರ ಸಹಕಾರದಿಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ತಪ್ಪನ್ನು  ಒಪ್ಪಿಕೊಂಡಿದ್ದಾನೆ. ‘ದೇವಿ ಮತ್ತು ದೈವಗಳ ಮೇಲಿದ್ದ ನಂಬಿಕೆ ಮತ್ತಷ್ಟು ಇಮ್ಮಡಿಗೊಂಡಿದೆ’ ಎಂದು ಸುಕುಮಾರ ಮೋಹನ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.