ಬ್ರಹ್ಮಾವರ: ‘ಗ್ರಾಮಗಳೇ ದೇಶದ ಜೀವಾಳ ಮತ್ತು ಯುವಜನತೆಯೇ ದೇಶದ ಭವಿಷ್ಯ. ಯುವಶಕ್ತಿ ಒಂದಾಗಿ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇಂತಹ ಗ್ರಾಮೀಣ ಕ್ರೀಡಾಕೂಟಗಳು ಸಹಕಾರಿ’ ಎಂದು ಶಾಸಕ ಯಶ್‌ಪಾಲ್ ಸುವರ್ಣ ಅಭಿಪ್ರಾಯಪಟ್ಟರು.
ನೀಲಾವರ ರಥಬೀದಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಚೈತನ್ಯ ಯುವಕ ಮಂಡಲದ ವತಿಯಿಂದ ನಡೆದ ರಾಜ್ಯಮಟ್ಟದ ಕೆಸರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಂಘ–ಸಂಸ್ಥೆಗಳು ಶೈಕ್ಷಣಿಕ, ಸಾಂಸ್ಕೃತಿಕ, ಆರೋಗ್ಯ ಮತ್ತು ಕ್ರೀಡಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ನೀಲಾವರ ರಥಬೀದಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನೀಲಾವರ ಮಹೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ನೀಲಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರಘುರಾಮ ಮಧ್ಯಸ್ಥ, ಪಂಚಾಯಿತಿ ಅಧ್ಯಕ್ಷೆ ಬೇಬಿ ಕೆ., ವಕೀಲ ಸುಪ್ರಸಾದ್ ಶೆಟ್ಟಿ, ಪ್ರಮುಖರಾದ ಧನಂಜಯ ಅಮೀನ್, ಸುರೇಶ ಶೆಟ್ಟಿ ತಡಾಲು, ರಾಜೀವ ಕುಲಾಲ, ಹೃದಯ ಜ್ಯೋತಿ ಜಯ ಮರಕಾಲ, ಗುರುರಾಜ ಮಕ್ಕಿತ್ತಾಯ, ಜ್ಯೋತಿ ಶೆಟ್ಟಿ, ಸುಮಾ ದೇವಾಡಿಗ, ಪ್ರಿಯಾ ಎಚ್, ಪ್ರಶಾಂತ್‌ನೀಲಾವರ, ಪಿಡಿಒ ಗೀತಾ ಬಾಳಿಗ, ಶಿಕ್ಷಕಿ ವಂದನಾ ರೈ ಕಾರ್ಕಳ ಇದ್ದರು.
ಇದೇ ಸಂದರ್ಭ ಮೆಸ್ಕಾಂನ ಹರೀಶ ವಿಠಲ್ ಮೆಂಡನ್ ಮತ್ತು ಶಿಕ್ಷಕ ಬಾಲಕೃಷ್ಣ ಶೆಟ್ಟಿ ಅವರನ್ನು ಗೌರವಿಸಲಾಯಿತು. ಎಳ್ಳಂಪಳ್ಳಿ ಸಂತೋಷ ಶೆಟ್ಟಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.