ADVERTISEMENT

ಸಾಲಿಗ್ರಾಮ: ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 4:45 IST
Last Updated 8 ಜುಲೈ 2025, 4:45 IST
ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಎದುರು ಸೋಮವಾರ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನಾ ಕಾರ್ಯಕ್ರಮ ನಡೆಯಿತು.
ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಎದುರು ಸೋಮವಾರ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನಾ ಕಾರ್ಯಕ್ರಮ ನಡೆಯಿತು.   

ಸಾಲಿಗ್ರಾಮ (ಬ್ರಹ್ಮಾವರ): ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಎದುರು 9/11 ಸಮಸ್ಯೆ ಅಕ್ರಮ ಸಕ್ರಮ 53, 57 ಅರ್ಜಿ ತಿರಸ್ಕಾರ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ರದ್ದತಿ, ವಿದ್ಯುತ್ ದರ ಏರಿಕೆ ಕುರಿತು ಬಿಜೆಪಿ ಮಾಡುತ್ತಿರುವ ಅಪಪ್ರಚಾರಕ್ಕೆ ಕಾಂಗ್ರೆಸ್‌ನಿಂದ ಜನರಿಗೆ ವಾಸ್ತವ ವಿಚಾರ ತಿಳಿಸುವ ಕಾರ್ಯಕ್ರಮ ಮತ್ತು ಪ್ರತಿಭಟನೆ ಸೋಮವಾರ ನಡೆಯಿತು.

ಕಾಂಗ್ರೆಸ್‌ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಮಾತನಾಡಿ, ಗ್ಯಾರಂಟಿ ಯೋಜನೆಗಳು, ಬಡವರ ಪರವಾದ ಎಲ್ಲ ಯೋಜನೆಗಳನ್ನು ದೇಶ, ರಾಜ್ಯಕ್ಕೆ ನೀಡಿದ್ದು ಕಾಂಗ್ರೆಸ್. ಬಿಜೆಪಿ ಅಧಿಕಾರದಲ್ಲಿದ್ದಾಗ ಬಡವರ ಪರವಾಗಿ ಯೋಜನೆಗಳನ್ನ ನೀಡದೆ ಈಗ ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಬಡವರಿಂದ ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಂ.ಎ.ಗಪೂರ್ ಮಾತನಾಡಿ, ಜನರ ದಿಕ್ಕು ತಪ್ಪಿಸುವ ಪ್ರತಿಭಟನೆಗಳು ಬಿಜೆಪಿಯಿಂದ ಆಗುತ್ತಿವೆ ಎಂದರು.

ADVERTISEMENT

ಗಣೇಶ್ ಕೆ. ನೆಲ್ಲಿಬೆಟ್ಟು ಮಾತನಾಡಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿ ಅಭಿವೃದ್ಧಿ ಕುಂಠಿತವಾಗಿರುವುದರ ಬಗ್ಗೆ ಹಾಗೂ ಆಡಳಿತ ಪಕ್ಷವೇ ಪ್ರತಿಭಟನೆ ಮಾಡುವುದು ಎಷ್ಟು ಸರಿ. ಏನೇ ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳು, ಆಡಳಿತ ಸದಸ್ಯರು ಪರಿಹರಿಸಬೇಕು. ಅದು ಬಿಟ್ಟು ಪ್ರತಿಭಟನೆ ಮಾಡಿ ಸುಳ್ಳಿನ ಪ್ರಪಂಚ ಕಟ್ಟಿ ಜನಪ್ರತಿನಿಧಿಗಳನ್ನುರಾಜಕೀಯಕ್ಕೋಸ್ಕರ ತಪ್ಪು ದಾರಿಗೆ ಎಳೆಯುವುದು ಸರಿಯಲ್ಲ ಎಂದು ಟೀಕಿಸಿದರು.

ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಬಸವ ಪೂಜಾರಿ ಗುಂಡ್ಮಿ, ಗೋಪಾಲ ಬಂಗೇರ, ಶೇಖರ ಕಾರ್ಕಡ, ದಿನೇಶ ಬಂಗೇರ ಗುಂಡ್ಮಿ, ಅಚ್ಚುತ ಪೂಜಾರಿ, ರತ್ನಾಕರ ಪೂಜಾರಿ ಪಾರಂಪಳ್ಳಿ, ಮಹಾಬಲ ಮಡಿವಾಳ, ಸೂರ್ಯಕಾಂತ ಶೆಟ್ಟಿ, ನಾಗೇಶ ಪೂಜಾರಿ ಪಾರಂಪಳ್ಳಿ, ಸುರೇಶ ನೆಲ್ಲಿಬೆಟ್ಟು, ನರಸಿಂಹ ದೇವಾಡಿಗ ನೆಲ್ಲಿಬೆಟ್ಟು, ವಸಂತಿ ಅಚ್ಚುತ ಪೂಜಾರಿ, ಪ್ರೇಮ ಗಣೇಶ ಮೆಂಡನ್, ಕಾರ್ಯಕರ್ತರು ಭಾಗವಹಿಸಿದ್ದರು. ಸಾಲಿಗ್ರಾಮ ಪ.ಪಂ. ವಿರೋಧ ಪಕ್ಷದ ನಾಯಕ ಶ್ರೀನಿವಾಸ ಅಮೀನ್ ಸ್ವಾಗತಿಸಿದರು. ಸದಸ್ಯ ರವೀಂದ್ರ ಕಾಮತ್ ಗುಂಡ್ಮಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.