ADVERTISEMENT

ಉಡುಪಿ | ‘ಸಂಸ್ಕೃತೋತ್ಸವ ಪ್ರತಿನಿತ್ಯ ಆಗಬೇಕು’

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 6:28 IST
Last Updated 25 ಆಗಸ್ಟ್ 2025, 6:28 IST
ಅದಮಾರು‌ ಮಠಾಧೀಶ ವಿಶ್ವಪ್ರಿಯತೀರ್ಥ ಶ್ರೀಪಾದರು ಮಾತನಾಡಿದರು
ಅದಮಾರು‌ ಮಠಾಧೀಶ ವಿಶ್ವಪ್ರಿಯತೀರ್ಥ ಶ್ರೀಪಾದರು ಮಾತನಾಡಿದರು   

ಉಡುಪಿ: ಸಂಸ್ಕಾರ ಉಳ್ಳ ಭಾಷೆಯೇ ಸಂಸ್ಕೃತ ಭಾಷೆ. ಸಂಸ್ಕೃತ ಮತ್ತು ಸಂಸ್ಕೃತಿ ಈ ಎರಡೂ ಮಾನವನಿಗೆ ಅಗತ್ಯ. ಸಂಸ್ಕೃತಿಯುಕ್ತ ದಿನಾಚರಣೆ ಸಂಸ್ಕೃತ ದಿನಾಚರಣೆಯಾಗಬೇಕು ಎಂದು ಅದಮಾರು‌ ಮಠಾಧೀಶ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಈಚೆಗೆ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲರೂ ಸಂಸ್ಕೃತ ಅಧ್ಯಯನ ಮಾಡಿ, ಪ್ರತಿದಿನವೂ ಸಂಸ್ಕೃತೋತ್ಸವವನ್ನು ಆಚರಿಸಿದರೆ ಉತ್ತಮ ಎಂದು ಹೇಳಿದರು.

ADVERTISEMENT

ಉಡುಪಿ ಎಸ್‌ಎಂಎಸ್‌ಪಿ ಸಂಸ್ಕೃತ ಮಹಾವಿದ್ಯಾಲಯದ ಉಪನ್ಯಾಸಕ ಅಜಿತ್ ಕುಮಾರ್ ಆಚಾರ್ಯ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರಾಮು ಎಲ್. ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಸಂಸ್ಕೃತ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾಲೇಜಿನ ಸಂಯೋಜಕ ವಿನಯ್ ಕುಮಾರ್, ಸಂಸ್ಕೃತ ಉಪನ್ಯಾಸಕ ಅಶ್ವಿನ್ ಉಪಸ್ಥಿತರಿದ್ದರು.ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ರಮೇಶ ಟಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಸ್ಕೃತ ಉಪನ್ಯಾಸಕ ಆನಂದ ಆಚಾರ್ಯ ಸನ್ಮಾನಿತರ ಪಟ್ಟಿಯನ್ನು ವಾಚಿಸಿದರು. ಅವನಿ ಹಾಗೂ ಭಾರ್ಗವಿ ಸಂಸ್ಕೃತ ಗೀತ ಗಾಯನ ಮಾಡಿದರು. ಕೀರ್ತನಾ ಕಾರ್ಯಕ್ರಮ ನಿರೂಪಿಸಿದರು. ರಾಜರಾಜೇಶ್ವರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.