ಉಡುಪಿ: ಜುಲೈ 15ರಂದು ರಾತ್ರಿ 8ರಿಂದ 29ರವರೆಗೆ ಜಿಲ್ಲಾ ಗಡಿಗಳನ್ನು ಸೀಲ್‌ಡೌನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಮಂಗಳವಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ತಜ್ಞ ವೈದ್ಯರ ಸಲಹೆಯಂತೆ ಜಿಲ್ಲೆಯಲ್ಲಿ ಲಾಕ್‌ಡೌನ್ ಬದಲು ಸೀಲ್‌ಡೌನ್ ಮಾಡಲು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಹೊರ ಜಿಲ್ಲೆಗಳಿಂದ ಯಾರೂ ಬರುವಂತಿಲ್ಲ, ಜಿಲ್ಲೆಯವರು ಹೊರಗೆ ಹೋಗುವಂತಿಲ್ಲ. ತುರ್ತು ವೈದ್ಯಕೀಯ ಅಗತ್ಯತೆಗಳಿಗೆ ಮಾತ್ರ ಜಿಲ್ಲೆಯನ್ನು ಪ್ರವೇಶಿಸಬಹುದು’ ಎಂದರು.
ಜಿಲ್ಲೆಯಿಂದ ಹೊರ ಹೋಗುವವರಿಗೆ ಹಾಗೂ ಬರುವವರಿಗೆ ಬುಧವಾರ ರಾತ್ರಿ 8ರವರೆಗೆ ಕಾಲಾವಕಾಶ ಇದೆ. ನಂತರ ಜಿಲ್ಲೆಯ ಎಲ್ಲ ಗಡಿಗಳು ಬಂದ್ ಆಗಲಿವೆ. ಸಾರ್ವಜನಿಕರ ಸಾರಿಗೆ ಸಹ ಇರುವುದಿಲ್ಲ. ಉಳಿದಂತೆ ಇತರೆ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.