ADVERTISEMENT

ಭಗವತ್ಸೇವೆ ಬದುಕಿನ ಭಾಗ್ಯದ ದಾರಿ: ಎಂ.ಬಿ. ಪುರಾಣಿಕ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 7:49 IST
Last Updated 3 ನವೆಂಬರ್ 2025, 7:49 IST
ಕಾರ್ಯಕ್ರಮದಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿದರು
ಕಾರ್ಯಕ್ರಮದಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿದರು   

ಉಡುಪಿ: ಬದುಕು ಭಗವಂತನ ಕೊಡುಗೆ. ಇಷ್ಟಪಟ್ಟು ಮಾಡಿದ ನಿಸ್ವಾರ್ಥ ಸೇವೆ ಭಗವಂತನಿಗೆ ತಲುಪುತ್ತದೆ. ಉಡುಪಿಯ ಜನರಿಗೆ ಪರ್ಯಾಯ ಎನ್ನುವುದು ಭಗವತ್ಸೇವೆಯ ವಿಶೇಷ ಅವಕಾಶ. ಅದರಲ್ಲಿ ಪಾಲುದಾರರಾಗುವುದೇ ಬದುಕಿನ ಭಾಗ್ಯದ ದಾರಿ ಎಂದು ಎಂ.ಬಿ. ಪುರಾಣಿಕ ಅಭಿಪ್ರಾಯಪಟ್ಟರು.

ಪರ್ಯಾಯ ಸ್ವಾಗತ ಸಮಿತಿ ಆಯೋಜಿಸಿದ ವಿಶೇಷ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನವೆಂಬರ್ 7ರಂದು ಸ್ವಾಗತ ಸಮಿತಿಯ ಗೌರವಾಧ್ಯಕ್ಷ ವೀರೇಂದ್ರ ಹೆಗ್ಗಡೆ ಅವರು ಭಾಗವಹಿಸಿ ಪರ್ಯಾಯ ಪೂರ್ವ ಅವಲೋಕನ ನಡೆಸುವವರಿದ್ದಾರೆ. ಆ ಸಭೆಗೆ ಪರ್ಯಾಯ ಸಂಬಂಧಿ ಎಲ್ಲಾ ಸಮಿತಿಯ ಸದಸ್ಯರ ಭಾಗವಹಿಸಬೇಕು ಎಂದು ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.

ADVERTISEMENT

ಮಠದ ದಿವಾನ ಉದಯಕುಮಾರ ಸರಳತ್ತಾಯ ಪರ್ಯಾಯದ ಯಶಸ್ಸಿಗೆ ಭಕ್ತರ ಸಹಕಾರ ಇರಲಿ ಎಂದರು.

ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಅವರು ಪರ್ಯಾಯ ಪೂರ್ವಭಾವಿ ತಯಾರಿ ಬಗೆಗೆ ಮಾಹಿತಿ ನೀಡಿದರು.

ಗೋಪಾಲಕೃಷ್ಣ ಅಸ್ರಣ್ಣ, ಜಯಕರ ಶೆಟ್ಟಿ ಇಂದ್ರಾಳಿ, ಜಯಪ್ರಕಾಶ ಕೆದ್ಲಾಯ, ಪ್ರಸಾದ್ ರಾಜ್ ಕಾಂಚನ್, ಮೋಹನ್ ಭಟ್ ಇದ್ದರು. ಅಶ್ವತ್ಥ ಭಾರದ್ವಾಜ್ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.