ADVERTISEMENT

ಶಾಂತಿನಿಕೇತನ ಸಂಸ್ಥೆ ನಮ್ಮೆಲ್ಲರ ಹೆಮ್ಮೆ: ಗೋಪಿನಾಥ್ ಭಟ್

ಕುಚ್ಚೂರು ಶಾಂತಿನಿಕೇತನ ಯುವ ವೃಂದದ ವಾರ್ಷಿಕೋತ್ಸವ: ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 13:13 IST
Last Updated 5 ಜೂನ್ 2025, 13:13 IST
ಹೆಬ್ರಿಯ ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದದ ವಾರ್ಷಿಕೋತ್ಸವ ಮತ್ತು ಪದಗ್ರಹಣದಲ್ಲಿ ಆಡಳಿತ ಮಂಡಳಿಯ ಸದಸ್ಯ ನರೇಂದ್ರ ಎಸ್‌ ಮರಸಣಿಗೆ ಅವರನ್ನು ಗೌರವಿಸಲಾಯಿತು
ಹೆಬ್ರಿಯ ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದದ ವಾರ್ಷಿಕೋತ್ಸವ ಮತ್ತು ಪದಗ್ರಹಣದಲ್ಲಿ ಆಡಳಿತ ಮಂಡಳಿಯ ಸದಸ್ಯ ನರೇಂದ್ರ ಎಸ್‌ ಮರಸಣಿಗೆ ಅವರನ್ನು ಗೌರವಿಸಲಾಯಿತು   

ಹೆಬ್ರಿ: ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ಕೆ ಶಾಂತಿನಿಕೇತನ ಸಂಸ್ಥೆಯು ಮಹತ್ವದ ಕೊಡುಗೆ ನೀಡಿದೆ. ಸಮಾಜಮುಖಿ ಕೆಲಸ ಮಾಡುವಾಗ ನಿರಂತರ ಸಹಕಾರ ನೀಡಿ, ಒಟ್ಟಾಗಿ ನಿಂತಾಗ ಸಂಸ್ಥೆ ಬೆಳೆಯುತ್ತದೆ. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶಾಂತಿನಿಕೇತನ ನಮ್ಮೆಲ್ಲರ ಹೆಮ್ಮೆ ಎಂದು ಉದ್ಯಮಿ, ಸಾಮಾಜಿಕ ಮುಖಂಡ ಮುನಿಯಾಲು ಗೋಪಿನಾಥ್ ಭಟ್ ಹೇಳಿದರು.

ಹೆಬ್ರಿಯ ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದದ ವಾರ್ಷಿಕೋತ್ಸವ ಮತ್ತು ಪದಗ್ರಹಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಂತಿನಿಕೇತನ ಸಂಸ್ಥೆ ಮಾಡಿರುವ ಸೇವಾ ಚಟುವಟಿಕೆಗಳು ಎಲ್ಲರಿಗೂ ಸ್ಫೂರ್ತಿ ಎಂದು ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಲಿತಿನ್ ಹೇಳಿದರು.

ADVERTISEMENT

ಬೆಸ್ಟ್ ಮೆಂಬರ್‌ ಆಗಿ ನರೇಂದ್ರ ಎಸ್, ಯುವವೃಂದದ ಲಕ್ಕಿ ಮೆಂಬರ್ ಆಗಿ ಸುಧಾಕರ್, ವಿದ್ಯಾರ್ಥಿ ಘಟಕದ ಲಕ್ಕಿ ಮೆಂಬರ್ ಆಗಿ ಪ್ರೀಶಾ ಆಯ್ಕೆಯಾದರು.

ಸುವರ್ಣ ಬ್ರದರ್ಸ್, ಕರುಣಾಕರ ಹೆಗ್ಡೆ ಬಚ್ಚಪ್ಪು, ಗೌರಿ ಸ್ಮರಣಾರ್ಥ ಚೇತನ ಬಸವಾನಿ, ಶಶಿಕಲಾ ಸಂಜೀವ ಮರಸಣಿಗೆ ಮತ್ತು ಕಲಾವತಿ ಕುಡಿಬೈಲು ಪ್ರಾಯೋಜಕತ್ವದ ವಿದ್ಯಾರ್ಥಿ ವೇತನ, ಶಾಂತಿನಿಕೇತನ ಸೌಹಾರ್ದ ಸಹಕಾರಿ ವತಿಯಿಂದ ವಿದ್ಯಾರ್ಥಿ ವೇತನವನ್ನು ನಿತಿನ್, ಚೈತನ್ಯ, ಕೀರ್ತನ್, ಪೃಥ್ವಿ ಆಚಾರ್ಯ, ಕೃತಿಕಾ ಅವರಿಗೆ ನೀಡಲಾಯಿತು‌.

ಲಿತಿನ್, ಮಾಜಿ ಅಧ್ಯಕ್ಷ ಅಧ್ಯಕ್ಷ ದೀಕ್ಷಿತ್ ನಾಯಕ್, ಸಹಕಾರ ನೀಡಿದ ನರೇಂದ್ರ ಎಸ್‌. ಮರಸಣಿಗೆ, ಶ್ರೀನಿವಾಸ್ ನಾಯ್ಕ್ ಚಾರ ಅವರನ್ನು ಸನ್ಮಾನಿಸಲಾಯಿತು.

ಕುಚ್ಚೂರು ಗ್ರಾಮ ಪಂಚಾಯಿತಿ ಸದಸ್ಯೆ ಸುಜಾತಾ ಶೆಟ್ಟಿ, ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಪೂಜಾರಿ, ಶಾಂತಿನಿಕೇತನ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಜಯಕರ್, ಪ್ರಧಾನ ಕಾರ್ಯದರ್ಶಿ ರಾಜೇಶ್ರೀ, ಆಡಳಿತ ಮಂಡಳಿ ಸದಸ್ಯರಾದ ನರೇಂದ್ರ ಎಸ್., ಪ್ರಸನ್ನ, ನಳಿನಿ, ನವೀನ್ ಶೆಟ್ಟಿ, ಕೆ. ಗಣೇಶ್, ಶ್ರೀನಿವಾಸ ಶೆಟ್ಟಿ, ರೇಷ್ಮಾ, ದೀಕ್ಷಿತ್ ನಾಯಕ್, ನಾಗರಾಜ್, ರಘುರಾಮ್ ಶೆಟ್ಟಿ, ರಾಜೇಶ್ ಇದ್ದರು. ಸಂಸ್ಥಾಪಕ ರಾಜೇಶ್ ನಿರೂಪಿಸಿ, ವಂದಿಸಿದರು. ನರೇಂದ್ರ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.