ADVERTISEMENT

ನವರಾತ್ರಿ: ಶಾರದಾ ದೇವಿಯ ಆರಾಧನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 14:18 IST
Last Updated 12 ಅಕ್ಟೋಬರ್ 2021, 14:18 IST
ಉಡುಪಿಯ ಬಿಜೆಪಿ ಕಚೇರಿಯಲ್ಲಿ ನವರಾತ್ರಿ ಅಂಗವಾಗಿ ಮಂಗಳವಾರ ಶಾರದಾ ಪೂಜೆ ಮಾಡಲಾಯಿತು.
ಉಡುಪಿಯ ಬಿಜೆಪಿ ಕಚೇರಿಯಲ್ಲಿ ನವರಾತ್ರಿ ಅಂಗವಾಗಿ ಮಂಗಳವಾರ ಶಾರದಾ ಪೂಜೆ ಮಾಡಲಾಯಿತು.   

ಉಡುಪಿ: ಜಿಲ್ಲೆಯಾದ್ಯಂತ ನವರಾತ್ರಿ ಅಂಗವಾಗಿ ಸಂಭ್ರಮದಿಂದ ಶಾರದಾ ಪೂಜೆ ನೆರವೇರಿತು. ಬಿಜೆಪಿ ಕಚೇರಿಯಲ್ಲಿ ನಗರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಶಾರದಾ ಪೂಜೆಯಲ್ಲಿ ಕಾಟೇಶ್ ಮತ್ತು ಬಳಗದಿಂದ ಭಜನೆ ನಡೆಯಿತು.

ಮಹಾ ಪೂಜೆಯ ನಂತರ ಅನ್ನ ಸಂತರ್ಪಣೆ ನಡೆಯಿತು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕ ಕೆ.ರಘುಪತಿ ಭಟ್, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ, ಮುಖಂಡರಾದ ಪೂರ್ಣಿಮಾ ಸುರೇಶ್ ನಾಯಕ್, ಯಶ್ಪಾಲ್ ಎ.ಸುವರ್ಣ, ದಿನಕರ ಬಾಬು, ಸಲೀಂ ಅಂಬಾಗಿಲು, ರಾಘವೇಂದ್ರ ಉಪ್ಪೂರು, ರವಿ ಅಮೀನ್, ಶ್ರೀಶ ನಾಯಕ್ ಪೆರ್ಣಂಕಿಲ, ನಯನಾ ಗಣೇಶ್, ಕುತ್ಯಾರು ನವೀನ್ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಗಿರೀಶ್ ಎಮ್. ಅಂಚನ್, ಶಿವಕುಮಾರ್ ಅಂಬಲಪಾಡಿ ಇದ್ದರು.

ಉಡುಪಿಯ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಸೋಮವಾರ ಶಾರದಾ ದೇವಿ ಪ್ರತಿಷ್ಠೆ ಮಾಡಲಾಗಿದ್ದು, ಮಂಗಳವಾರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಗರ ಹಲವು ಕಡೆಗಳಲ್ಲಿ ಸಾರ್ವಜನಿಕ ಶಾರದೋತ್ಸವ ನಡೆಯುತ್ತಿದ್ದು, ಭಕ್ತರು ದೇವಿಯ ದರ್ಶನ ಪಡೆದರು. ಮಂಗಳವಾರ ಹಲವು ದೇವಸ್ಥಾನಗಳಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.