
ಪ್ರಜಾವಾಣಿ ವಾರ್ತೆ
ಉಡುಪಿ: ಶಿರೂರು ಮಠಾಧೀಶ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯವು 2026ರ ಜನವರಿ 18 ರಂದು ನಡೆಯಲಿದ್ದು, ಪರ್ಯಾಯದ ನಾಲ್ಕನೇ ಮುಹೂರ್ತವಾದ ‘ಧಾನ್ಯ ಮುಹೂರ್ತ’ ಇದೇ 14 ರಂದು ಬೆಳಿಗ್ಗೆ 7.45ಕ್ಕೆ ನಡೆಯಲಿದೆ ಎಂದು ಮಠದ ದಿವಾನ ಉದಯ ಕುಮಾರ್ ಸರಳತ್ತಾಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಪರ್ಯಾಯ ಪೂರ್ವ ಮುಹೂರ್ತಗಳಲ್ಲಿ ಇದು ಕೊನೆಯ ಮುಹೂರ್ತವಾಗಿದೆ. ಭತ್ತ ಮತ್ತು ಧಾನ್ಯ ಸಂಗ್ರಹದ ಸಂಕಲ್ಪದಿಂದ ಈ ಮುಹೂರ್ತವು ನಡೆಯುತ್ತಿದೆ ಎಂದರು.
ಬೆಳಿಗ್ಗೆ 6.15ಕ್ಕೆ ಶಿರೂರು ಮಠದಲ್ಲಿ ದೇವತಾ ಪ್ರಾರ್ಥನೆ, ಬಳಿಕ ಅನಂತೇಶ್ವರ, ಚಂದ್ರಮೌಳೀಶ್ವರ, ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿ, ಧಾನ್ಯ ಮುಹೂರ್ತ ನೆರವೇರಲಿದೆ. ಅನಂತರ ಕಟ್ಟಿಗೆ ರಥಕ್ಕೆ ಶಿಖರ ಪ್ರತಿಷ್ಠೆ ನಡೆಯಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.