ಶಿರ್ವ: ಶಂಕರಪುರ ಶ್ರೀಸಾಯಿ ಮುಖ್ಯಪ್ರಾಣ ಕಾಲಭೈರವ ದೇವಸ್ಥಾನ ದ್ವಾರಕಾಮಯಿ ಮಠದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ 18 ಅಡಿ ಎತ್ತರದ ಶ್ರೀ ಮುಖ್ಯಪ್ರಾಣ ಮೂರ್ತಿ ಪ್ರತಿಷ್ಠಾಪನೆಯ ಪೂರ್ವಭಾವಿಯಾಗಿ ಏಕಶಿಲಾ ಮೂರ್ತಿಯ ಮಾದರಿ ಬಿಡುಗಡೆ ಸಮಾರಂಭ ನಡೆಯಿತು.
ಪ್ರವೀಣ್ ರಾಜ್ ಮಚೇಂದ್ರನಾಥ ಬಾಬಾ ಅವರು, ಶಿಲಾಮೂರ್ತಿಯ ಮಾದರಿಯನ್ನು ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.
ಮಠದ ಪೀಠಾಧಿಪತಿ ಸಾಯಿ ಈಶ್ವರ್ ಗುರೂಜಿ ಮಾತನಾಡಿ, ಏ. 2ರಂದು ಹನುಮಾನ್ ಜಯಂತಿಯ ಪರ್ವಕಾಲದಲ್ಲಿ 18 ಅಡಿ ಎತ್ತರದ ಮುಖ್ಯಪ್ರಾಣ ದೇವರ ಏಕಶಿಲಾ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ. ಈ ಶಿಲಾಮೂರ್ತಿಯ ಮಾದರಿಯನ್ನು ಅಂಜನಾದ್ರಿಯಲ್ಲಿ ಪೂಜಿಸಿ, ಹನುಮ ಜ್ಯೋತಿ ಮೂಲಕ ಕ್ಷೇತ್ರಕ್ಕೆ ತರಲಾಗುವುದು ಎಂದರು.
ಅದೇ ರೀತಿ ಜು. 10ರಂದು ಸಾಯಿ ದರ್ಬಾರ್ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭದಲ್ಲಿ ಈಶ್ವರ ಅನುಗ್ರಹ ಪ್ರಶಸ್ತಿ ನೀಡಿ ಸಾಧಕರನ್ನು ಗೌರವಿಸಲಾಗುವುದು ಎಂದರು.
ಈ ಸಂದರ್ಭ ಶಿಲ್ಪಿ ಗಣೇಶ್ ಮತ್ತು ಶಿಲಾಮೂರ್ತಿಯ ಮಾದರಿ ತಯಾರಿಸಿದ ಕೇಶವ ಆಚಾರ್ಯ ಅವರನ್ನು ಗೌರವಿಸಲಾಯಿತು.
ಕ್ಷೇತ್ರದ ಟ್ರಸ್ಟಿ ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಪ್ರತಿಷ್ಠಾಪನಾ ಸಮಿತಿಯ ಪದಾಧಿಕಾರಿಗಳಾದ ಅಭಿರಾಜ್ ಸುವರ್ಣ, ರಾಜೇಶ್ ಇನ್ನಂಜೆ, ರಾಮಪ್ಪ ಪೂಜಾರಿ, ಸಂತೆಕಟ್ಟೆ, ಕಿರಣ್ ಜೋಗಿ, ಜಯರಾಮ ಶೆಟ್ಟಿಗಾರ್, ವಿನೋದ್ ಕುಮಾರ್, ಸುರೇಶ್ ಪೂಜಾರಿ, ರಾಘವೇಂದ್ರ ಅಮೀನ್, ಶ್ರೀಧರ ಅಮೀನ್, ವಿಜಯ ಕುಂದರ್, ಸತೀಶ ದೇವಾಡಿಗ, ಅಖಿಲೇಶ್, ದಿನೇಶ ಶೆಟ್ಟಿ ಇದ್ದರು.
ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ಗೀತಾಂಜಲಿ ಎಂ. ಸುವರ್ಣ ವಂದಿಸಿದರು. ಬಳಿಕ ಅಖಂಡ ಶ್ರೀಸಾಯಿ ಸಚರಿತ್ರೆ ಪಾರಾಯಣ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.