ADVERTISEMENT

ಉಡುಪಿ ಚಿಕ್ಕಮಗಳೂರು: ಶೋಭಾ ದಿಗ್ವಿಜಯ

ಶೋಭಾ ಪಡೆದ ಮತ–7,18,916, ಪ್ರಮೋದ್ ಪಡೆದ ಮತ–3,69,317

​ಪ್ರಜಾವಾಣಿ ವಾರ್ತೆ
Published 23 ಮೇ 2019, 15:59 IST
Last Updated 23 ಮೇ 2019, 15:59 IST
   

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 3,49,599 ಮತಗಳ ಅಂತರದಿಂದಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರನ್ನು ಪರಾಭವಗೊಳಿಸಿದರು.

ಒಟ್ಟು 21 ಸುತ್ತುಗಳ ಮತ ಎಣಿಕೆಯಲ್ಲಿ ಶೋಭಾ ಕರಂದ್ಲಾಜೆ7,18,916 ಮತಗಳನ್ನು ಪಡೆದರು. ಪ್ರತಿಸ್ಪರ್ಧಿ ಪ್ರಮೋದ್ ಮಧ್ವರಾಜ್3,69,317 ಮತಗಳನ್ನು ಪಡೆದು ಸೋಲೊಪ್ಪಿಕೊಂಡರು.

2014ರ ಲೋಕಸಭಾ ಚುನಾವಣೆಯಲ್ಲೂ ಶೋಭಾ1,81,643 ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಬಾರಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿದ್ದಾರೆ. ಕಣದಲ್ಲಿ 12 ಅಭ್ಯರ್ಥಿಗಳಿದ್ದರೂ ಬಿಎಸ್‌ಪಿಯ ಪರಮೇಶ್ವರ (15,947) ಅವರನ್ನು ಬಿಟ್ಟರೆ ಉಳಿದವರು 5 ಅಂಕಿಯ ಗಡಿ ದಾಟಲಿಲ್ಲ.

ADVERTISEMENT

ಮತ ಎಣಿಕೆ ಸಾಗಿದ ಹಾದಿ:

ಮೊದಲ ಸುತ್ತಿನ ಮತ ಎಣಿಕೆಯಲ್ಲೇ ದೊಡ್ಡ ಮುನ್ನಡೆ ಪಡೆಯವ ಮೂಲಕ ಶೋಭಾ ಶುಭಾರಂಭ ಮಾಡಿದರು. ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಪ್ರತಿಯೊಂದು ಸುತ್ತಿನಲ್ಲೂ ಲೀಡ್ ಹೆಚ್ಚಿಸಿಕೊಳ್ಳುತ್ತಲೇ ಸಾಗಿದರು. ಪ್ರಮೋದ್ ಯಾವ ಸುತ್ತಿನಲ್ಲೂ ಮುನ್ನಡೆಯನ್ನು ಪಡೆಯಲಿಲ್ಲ.

ಮೂರನೇ ಸುತ್ತಿನಲ್ಲಿ 1 ಲಕ್ಷ ಮತಗಳ ಗಡಿ ದಾಟಿದ ಶೋಭಾ, 5ನೇ ಸುತ್ತಿನಲ್ಲಿ 2 ಲಕ್ಷ, 7ನೇ ಸುತ್ತಿನಲ್ಲಿ 3 ಲಕ್ಷ, 10ನೇ ಸುತ್ತಿನಲ್ಲಿ 4 ಲಕ್ಷ, 12ನೇ ಸುತ್ತಿನಲ್ಲಿ 5 ಲಕ್ಷ, 14ನೇ ಸುತ್ತಿನಲ್ಲಿ 6 ಲಕ್ಷ, 18ನೇ ಸುತ್ತಿನಲ್ಲಿ 7 ಲಕ್ಷ ಮತಗಳ ಗಡಿಯನ್ನು ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.