ADVERTISEMENT

ಉಡುಪಿ: ‘ಸಾಮಾಜಿಕ ಪ್ರಜ್ಞೆಯ ಕಾರ್ಯ ಶ್ಲಾಘನೀಯ’

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 5:38 IST
Last Updated 8 ಸೆಪ್ಟೆಂಬರ್ 2025, 5:38 IST
ಅಜೆಕಾರ್ ಪದ್ಮಗೋಪಾಲ್ ಎಜುಕೇಷನ್ ಟ್ರಸ್ಟ್ ವತಿಯಿಂದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ.ಗೋಪ ಶೆಟ್ಟಿ ಅವರ ಜನ್ಮದಿನ ಆಚರಿಸಲಾಯಿತು
ಅಜೆಕಾರ್ ಪದ್ಮಗೋಪಾಲ್ ಎಜುಕೇಷನ್ ಟ್ರಸ್ಟ್ ವತಿಯಿಂದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ.ಗೋಪ ಶೆಟ್ಟಿ ಅವರ ಜನ್ಮದಿನ ಆಚರಿಸಲಾಯಿತು   

ಕಾರ್ಕಳ: ‘ಸಾಮಾಜಿಕ ಪ್ರಜ್ಞೆಯ ಜವಾಬ್ದಾರಿಯುತ ಕಾರ್ಯಗಳು ಸದಾ ಶ್ಲಾಘನೀಯ’ ಎಂದು ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಪ್ರಸೂತಿ, ಸ್ತ್ರೀರೋಗ ತಜ್ಞ ಡಾ.ಸಂಜಯ್ ಹೇಳಿದರು.

ಇಲ್ಲಿನ ಅಜೆಕಾರ್ ಪದ್ಮಗೋಪಾಲ್ ಎಜುಕೇಷನ್ ಟ್ರಸ್ಟ್ ವತಿಯಿಂದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ.ಗೋಪ ಶೆಟ್ಟಿ ಅವರ 104ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸಾಮಾಜಿಕ ನೆರವು ಸೇವಾ ಕಾಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಭ್ಯತೆ ನಡೆನುಡಿಯ ಮಾದರಿ ನಾಯಕರಲ್ಲಿ ಬೇಕು. ಅದು ಸಂಸ್ಥೆಯ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅವರದ್ದು ಎಂದರು.

ಗೌರವ ಸ್ವೀಕರಿಸಿದ ಸಮಾಜಸೇವಕ ವಿಶು ಶೆಟ್ಟಿ ಮಾತನಾಡಿ, ಯುವಜನರು ದುಶ್ಚಟಗಳಿಗೆ ಒಳಗಾಗದೆ ಸದೃಢ ಸಮಾಜದ ಆಸ್ತಿಯಾಗಿ ಮಾದರಿಯಾಗಿ ಹೊರಹೊಮ್ಮಬೇಕು ಎಂದರು.

ADVERTISEMENT

ಟ್ರಸ್ಟ್‌ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಮೌಲಿಕ ವಿಚಾರಧಾರೆ ಮೈಗೂಡಿಸಿಕೊಂಡಾಗ ನಮ್ಮ ಸಾಮಾಜಿಕ ಸೇವೆ ಸಾರ್ಥಕ ಎಂದರು.

ಕುಕ್ಕುಂದೂರು ಗ್ರಾಮ ಪಂಚಾಯಿತಿ ಸದಸ್ಯ ರಹಮತ್ತುಲ್ಲಾ, ಅಜೆಕಾರ್ ಪದ್ಮಗೋಪಾಲ್ ಎಜುಕೇಷನ್‌ ಟ್ರಸ್ಟ್‌ ಟ್ರಸ್ಟಿ ಅನಿಲ್ ಕುಮಾರ್ ಜೈನ್, ಮಣಿಪಾಲ್ ಹೈಸ್ಕೂಲ್ ಟ್ರಸ್ಟ್ ಅಧ್ಯಕ್ಷ, ಸಂಚಾಲಕ ಪ್ರಕಾಶ್ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಪ್ರಾಂಶುಪಾಲ ದಿನೇಶ್ ಎಂ. ಕೊಡವೂರ್, ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಂತೋಷ್, ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಗಣೇಶ್, ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ, ಉಪ ಪ್ರಾಂಶುಪಾಲ ಸಾಹಿತ್ಯ, ಉಷಾ ರಾವ್ ಯು, ಡೀನ್ ಅಕಾಡೆಮಿಕ್ಸ್ ಮಿಥುನ್ ಯು, ಹಿತೈಷಿ ದೇವೇಂದ್ರ ನಾಯ್ಕ್, ಕನ್ನಡ ಉಪನ್ಯಾಸಕ ವಿನಯಚಂದ್ರ ಭಾಗವಹಿಸಿದ್ದರು. ಇಂಗ್ಲಿಷ್‌ ವಿಭಾಗ ಮುಖ್ಯಸ್ಥೆ ಸಂಗೀತಾ ಕುಲಾಲ್ ನಿರೂಪಿಸಿದರು.

ರಕ್ತದಾನ ಶಿಬಿರ: ಅಜೆಕಾರ್ ಪದ್ಮಗೋಪಾಲ್ ಎಜುಕೇಷನ್ ಟ್ರಸ್ಟ್ ವತಿಯಿಂದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ.ಗೋಪ ಶೆಟ್ಟಿ ಅವರ ಜನ್ಮದಿನದ ಅಂಗವಾಗಿ ಶಿಕ್ಷಣ ಸಂಸ್ಥೆ, ಹಿರಿಯ ವಿದ್ಯಾರ್ಥಿ ಸಂಘ ಜ್ಞಾನಸುಧಾ, ಕೆಎಂಸಿ ಬ್ಲಡ್‌ಸೆಂಟರ್‌ ನೆರವಿನಲ್ಲಿ ಆಯೋಜಿಸಿದ ರಕ್ತದಾನ ಶಿಬಿರವನ್ನು ಕಸ್ತೂರ್ಬಾ ಹಾಸ್ಪಿಟಲ್ ರಕ್ತನಿಧಿ, ಎಚ್‌ಬಿಟಿ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಡಾ.ಗಣೇಶ್ ಮೋಹನ್ ಉದ್ಘಾಟಿಸಿದರು. ರಕ್ತದಾನ ಶಿಬಿರದಲ್ಲಿ 83 ಯುನಿಟ್ ರಕ್ತ ಸಂಗ್ರಹವಾಯಿತು.

ಗೌರವ ಧನಸಹಾಯ ಅಜೆಕಾರ್ ಪದ್ಮಗೋಪಾಲ್ ಎಜುಕೇಷನ್ ಟ್ರಸ್ಟ್ ವತಿಯಿಂದ ಸಮಾಜಸೇವಕ ಅಂಬಲಪಾಡಿ ವಿಶು ಶೆಟ್ಟಿ ಸ್ವಚ್ಛ ಕಾರ್ಕಳ ರಾಯಭಾರಿ ಫೆಲಿಕ್ಸ್ ಜೋಸೆಫ್ ವಾಜ್‌ ಅವರಿಗೆ ತಲಾ ₹10 ಸಾವಿರ ಕುಕ್ಕುಂದೂರು ಹಿರ್ಗಾನ ಅಜೆಕಾರ್ ಬೈಲೂರು ಗ್ರಾಮದ 18 ಮಂದಿ ಸ್ವಚ್ಛತಾ ಸಿಬ್ಬಂದಿಗೆ ತಲಾ ₹5 ಸಾವಿರ ನೀಡಿ ಗೌರವಿಸಲಾಯಿತು. ಕ್ಷಯಪೀಡಿತ 8 ಜನರಿಗೆ ತಲಾ ₹3 ಸಾವಿರ ಅಪಘಾತಕ್ಕೀಡಾದ ಹಿರಿಯ ವಿದ್ಯಾರ್ಥಿ ಕಿರಣ್ ನಾಯಕ್‌ ಅವರಿಗೆ ₹20 ಸಾವಿರ ತೊರೆಹಡ್ಲು ಶಾಲೆಗೆ ₹10 ಸಾವಿರ ಧನಸಹಾಯ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.