ಬ್ರಹ್ಮಾವರ: ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಆ.15, 2012ರಲ್ಲಿ ಕೋಟದ ಡಿವೈನ್ ಪಾರ್ಕ್‌ನ ಸಭಾಂಗಣದಲ್ಲಿ ನಡೆದ ರಾಷ್ಟ್ರನಿರ್ಮಾಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಂದು ಎಸ್‌ಪಿಬಿ ನಡೆಸಿಕೊಟ್ಟ 3 ಗಂಟೆಯ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಎಸ್‌ಪಿಬಿ ಅವರಿಗೆ ‘ನಾದನೇತಾರ’ ಬಿರುದು ಪ್ರದಾನ ಮಾಡಿದ್ದರು. ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವೈನ್ ಪಾರ್ಕ್‌ನ ಆಡಳಿತ ನಿರ್ದೇಶಕರಾದ ಚಂದ್ರಶೇಖರ ಉಡುಪ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.