ADVERTISEMENT

ಹೆಜಮಾಡಿಯಲ್ಲಿ ಪಡುಬಿದ್ರಿ ವೃತ್ತ ಮಟ್ಟದ ಕ್ರೀಡಾಕೂಟ: ಪ್ರಕಾಶ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 15:51 IST
Last Updated 22 ಸೆಪ್ಟೆಂಬರ್ 2022, 15:51 IST
ಹೆಜಮಾಡಿಯಲ್ಲಿ ಬುಧವಾರ ನಡೆದ ಪಡುಬಿದ್ರಿ ವೃತ್ತ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ರಾಷ್ಟ್ರೀಯ ಹೈಜಂಪ್ ಪಟು ಪ್ರಕಾಶ್ ಶೆಟ್ಟಿ ಹೆಜಮಾಡಿ ಚಾಲನೆ ನೀಡಿದರು.
ಹೆಜಮಾಡಿಯಲ್ಲಿ ಬುಧವಾರ ನಡೆದ ಪಡುಬಿದ್ರಿ ವೃತ್ತ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ರಾಷ್ಟ್ರೀಯ ಹೈಜಂಪ್ ಪಟು ಪ್ರಕಾಶ್ ಶೆಟ್ಟಿ ಹೆಜಮಾಡಿ ಚಾಲನೆ ನೀಡಿದರು.   

ಪಡುಬಿದ್ರಿ: ‘ಕ್ರೀಡಾಳುಗಳು ಸ್ವಯಂ ಸ್ಫೂರ್ತಿಯಿಂದ ಕ್ರೀಡಾ ಚಟುವಟಿಕೆ ನಡೆಸಿಕೊಂಡು ಹೋಗಬೇಕು. ಹೀಗೆ ಮಾಡಿದರೆ ಉನ್ನತ ಸಾಧನೆ ಮಾಡಬಹುದು’ ಎಂದು ರಾಷ್ಟ್ರೀಯ ಹೈಜಂಪ್ ಪಟು ಪ್ರಕಾಶ್ ಶೆಟ್ಟಿ ಹೆಜಮಾಡಿ ಹೇಳಿದರು.

ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಉಡುಪಿ ವಲಯ ಕ್ಷೇತ್ರ ಶಿಕ್ಷಣಾಕಾರಿ ಕಚೇರಿ ಹಾಗೂ ಹೆಜಮಾಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಹೆಜಮಾಡಿಯ ಬಸ್ತಿಪಡ್ಪು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಡುಬಿದ್ರಿ ವೃತ್ತ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಂಡುರಂಗ ಸಿ.ಕರ್ಕೇರ ದೀಪ ಬೆಳಗಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ ಧ್ವಜಾರೋಹಣ ಮಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪವಿತ್ರಾ ಗಿರೀಶ್, ಸದಸ್ಯರಾದ ಶಿವಕುಮಾರ್, ಶರಣ್ ಮಟ್ಟು, ಸುಗುಣ, ವಿವಿಧ ಸಂಘಟನೆಗಳ ಮುಖ್ಯಸ್ಥರಾದ ಶಿವರಾಮ ಶೆಟ್ಟಿ, ಶೇಖರ್ ಹೆಜ್ಮಾಡಿ, ರೋಲಿ ಡಿಕೋಸ್ತಾ, ಅಬ್ದುಲ್ ಅಜೀಜ್ ಹೆಜ್ಮಾಡಿ, ಸಂಜೀವ ಮಾಸ್ಟರ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಉಮಾ, ರಿತೇಶ್ ಕುಮಾರ್ ಶೆಟ್ಟಿ, ಕವಿತಾ, ಮಧುಕರ್ ಇದ್ದರು. ಮುಖ್ಯ ಶಿಕ್ಷಕಿ ಲತಾ ಸ್ವಾಗತಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.