ADVERTISEMENT

ಜ್ಞಾನಸುಧಾ ಆಗಿ ಬೆಳೆದ ಮಣಿಪಾಲ: ಸುಧಾಕರ್ ಪೈ

​ಪ್ರಜಾವಾಣಿ ವಾರ್ತೆ
Published 12 ಮೇ 2025, 13:03 IST
Last Updated 12 ಮೇ 2025, 13:03 IST
ಮಣಿಪಾಲ ಜ್ಞಾನಸುಧಾದ ನವೀಕೃತ ಕಟ್ಟಡ ಮತ್ತು ವಿದ್ಯಾನಗರ ಗ್ರೀನ್ಸ್ ಕ್ರೀಡಾಂಗಣವನ್ನು ಲೋಕಾರ್ಪಣೆಗೊಳಿಸಲಾಯಿತು
ಮಣಿಪಾಲ ಜ್ಞಾನಸುಧಾದ ನವೀಕೃತ ಕಟ್ಟಡ ಮತ್ತು ವಿದ್ಯಾನಗರ ಗ್ರೀನ್ಸ್ ಕ್ರೀಡಾಂಗಣವನ್ನು ಲೋಕಾರ್ಪಣೆಗೊಳಿಸಲಾಯಿತು    

ಕಾರ್ಕಳ: ಮಣ್ಣುಪಳ್ಳ ಮಣಿಪಾಲವಾಗಿ, ಮಣಿಪಾಲ ಶಿಕ್ಷಣ ಸಂಸ್ಥೆಗಳು ತಲೆಎತ್ತಿದ ನಂತರ ಜ್ಞಾನಸುಧೆಯಾಗಿ ಬೆಳಗುತ್ತಿದೆ ಎಂದು ಮಣಿಪಾಲ ಗ್ರೂಪ್ಸ್ ಅಧ್ಯಕ್ಷ ಟಿ. ಸುಧಾಕರ್ ಪೈ ಹೇಳಿದರು.

ತಾಲ್ಲೂಕಿನ ಅಜೆಕಾರು ಪದ್ಮ ಗೋಪಾಲ ಎಜುಕೇಷನ್ ಟ್ರಸ್ಟ್ ಆಶ್ರಯದಲ್ಲಿ ಈಚೆಗೆ ಮಣಿಪಾಲ ಜ್ಞಾನಸುಧಾದ ನವೀಕೃತ ಕಟ್ಟಡ ಮತ್ತು ವಿದ್ಯಾನಗರ ಗ್ರೀನ್ಸ್ ಕ್ರೀಡಾಂಗಣ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಿಂದ ಸ್ಫರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಿಗಲಿ ಎಂದರು.

ADVERTISEMENT

ಗ್ರಂಥಾಲಯವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಮುಖಂಡ ರಘುಪತಿ ಭಟ್‌ ವಿದ್ಯಾನಗರ ಗ್ರೀನ್ಸ್ ಕ್ರೀಡಾಂಗಣ, ಜಯಾ ಸುಧಾಕರ ಪೈ ಅವರು ಶಾಂತಿ ರಮೇಶ ಪೈ ಸ್ಮಾರಕ ಸಭಾಂಗಣವನ್ನು, ಶಕ್ತಿ ಎಜುಕೇಶನ್ ಟ್ರಸ್ಟ್ ಆಡಳಿತಾಧಿಕಾರಿ ಕೆ.ಸಿ ನಾಯ್ಕ್ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಷನ್ ಟ್ರಸ್ಟ್ ಕಚೇರಿ ಉದ್ಘಾಟಿಸಿದರು.

ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿಯಲ್ಲಿ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ ಸ್ವಸ್ತಿ ಕಾಮತ್, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ರ‍್ಯಾಂಕ್ ಪಡೆದ ರಕ್ಷಾ ರಾಮಚಂದ್ರ, ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ‍್ಯಾಂಕ್ ಹಾಗೂ ಉಡುಪಿಗೆ ಪ್ರಥಮ ರ‍್ಯಾಂಕ್ ಪಡೆದ ಆಸ್ತಿ ಶೆಟ್ಟಿ, ಜೆಇಇ ಮೇನ್‌ನಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕಾರ್ಕಳ ಜ್ಞಾನಸುಧಾದ ಆಕಾಶ್ ಎಚ್ ಪ್ರಭು ಮತ್ತು ಉಡುಪಿ ಜ್ಞಾನಸುಧಾಕ್ಕೆ ಪ್ರಥಮ ಸ್ಥಾನಿಯಾದ ಅಪೂರ್ವ್ ವಿ ಕುಮಾರ್‌ ಅವರನ್ನು ಸನ್ಮಾನಿಸಲಾಯಿತು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಮಣಿಪಾಲ ಹೈಸ್ಕೂಲ್ ಟ್ರಸ್ಟ್ ಸಂಚಾಲಕ ಪ್ರಕಾಶ ಶೆಟ್ಟಿ, ಅಜೆಕಾರು ಪದ್ಮಗೋಪಾಲ್  ಉಪಸ್ಥಿತರಿದ್ದರು. ಶಮಿತಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.