ADVERTISEMENT

ಸರ್ವ ಸಮುದಾಯಕ್ಕೂ ಆಧಾರ ಬಂಟ ಸಮಾಜ: ಗುರುದೇವನಂದ ಸ್ವಾಮೀಜಿ

ವಿಶ್ವ ಬಂಟರ ಸಮ್ಮೇಳ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2018, 16:18 IST
Last Updated 9 ಸೆಪ್ಟೆಂಬರ್ 2018, 16:18 IST
ವಿಶ್ವ ಬಂಟರ ಸಮ್ಮೇಳವನ್ನು ನಿವೃತ್ತ ಲೋಕಯುಕ್ತ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ  ಉದ್ಘಾಟಿಸಿದರು.ಪ್ರಜಾವಾಣಿ ಚಿತ್ರ
ವಿಶ್ವ ಬಂಟರ ಸಮ್ಮೇಳವನ್ನು ನಿವೃತ್ತ ಲೋಕಯುಕ್ತ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ  ಉದ್ಘಾಟಿಸಿದರು.ಪ್ರಜಾವಾಣಿ ಚಿತ್ರ   

ಉಡುಪಿ:‌ ‘ಯಾವುದೇ ಕೆಲಸ ಕೈಗೆತ್ತಿ ಕೊಂಡರೂ ಅದನ್ನು ಗುರಿಮುಟ್ಟಿಸುವ ಸಾಮರ್ಥ್ಯವನ್ನು ಬಂಟ ಸಮುದಾಯ ಹೊಂದಿದೆ. ಇದಕ್ಕೆ ಅವರಲ್ಲಿ ಇರುವ ಇಚ್ಛಾಶಕ್ತಿಯೇ ಕಾರಣ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದರು.

ಜಾಗತಿಕ ಬಂಟ ಸಂಘಗಳ ಒಕ್ಕೂಟ, ಉಡುಪಿ ಬಂಟರ ಸಂಘಗಳ ಸಹಯೋಗದಲ್ಲಿ ಭಾನುವಾರನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾ ಭವನದಲ್ಲಿ ಆಯೋಜಿಸಿದ್ದ ವಿಶ್ವ ಬಂಟರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.‌

‘ಬಂಟ ಸಮುದಾಯದವರು ರಾಜ ಕೀಯ, ಶಿಕ್ಷಣ, ವಾಣಿಜ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಹೊರಹೊಮ್ಮಿದ್ದಾರೆ. 70ರ ದಶಕದಲ್ಲಿ ಭೂ ಮಸೂದೆ ಕಾಯ್ದೆ ಜಾರಿಗೆ ಬಂದ ಪರಿಣಾಮವಾಗಿಹೆಚ್ಚಿನ ಬಂಟರು ಸಾಮಾಜಿಕ ಹಾಗೂ ಆರ್ಥಿಕವಾಗಿ ವಿಚಲಿತರಾಗಿದ್ದರು. ಆದರೂ ಸ್ವ–ಸಾಮರ್ಥ್ಯದಿಂದ ಸದೃಢರಾಗಿ, ಸಮಾಜ ದಲ್ಲಿ ಬಲಿಷ್ಠ ಸಮುದಾಯವಾಗಿ ಗುರುತಿಸಿಕೊಂಡಿರುವುದು ಸಂತೋಷದ ವಿಷಯ’ ಎಂದು ಹೇಳಿದರು.

ADVERTISEMENT

‘ಬಂಟರ ಸಮುದಾಯದಲ್ಲಿ ಇನ್ನೂ ಸಾಕಷ್ಟು ಮಂದಿ ಬಡವರಿದ್ದು, ಅವರ ಅಭಿವೃದ್ಧಿಗೆ ಶ್ರಮಿಸಬೇಕಾಗಿರುವುದು ಸಮುದಾಯದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅದಕ್ಕೆ ಅಗತ್ಯವಿರುವ ಸಹಾಯ ಮಾಡಲು ನಾನೂ ಸಿದ್ಧ’ ಎಂದು ಭರವಸೆ ನೀಡಿದರು.

ಒಡಿಯೂರು ಕ್ಷೇತ್ರದ ಗುರುದೇ ವಾನಂದ ಸ್ವಾಮೀಜಿ ಮಾತನಾಡಿ, ‘ಮಾತೃ ಪ್ರಧಾನ ಮೂಲ ಬಂಟರದ್ದು. ಸಮುದಾಯ ಮಾತೃ ಪ್ರಧಾನ ಸಂಸ್ಕೃತಿ ಯನ್ನು ಹೊಂದಿದೆ.ಇಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಗೌರವಾದರ, ಸ್ಥಾನ ಮಾನಗಳಿವೆ. ಸಂವಿಧಾನ ಬರುವ ಮೊದಲೇ ಬಂಟ ಸಮುದಾಯ ಲಿಂಗ ತಾರತಮ್ಯ, ಅಸಮಾನತೆ ನಿವಾರಿಸಿದೆ. ಎಲ್ಲ ಸಮುದಾಯಕ್ಕೂ ಇದು ಮಾದರಿಯಾಗಿದೆ’ ಎಂದು ಹೇಳಿದರು.

‘ನಾಯಕತ್ವಕ್ಕೆ ಇನ್ನೊಂದು ಹೆಸರೇ ಬಂಟ ಸಮುದಾಯ. ಬಂಟ ಅಂದರೆ ಸಂಘಟಕ ಎಂದರ್ಥ. ತಾನು ಬೆಳೆಯು ವುದರ ಜೊತೆ ಅನ್ಯ ಸಮಾಜವನ್ನು ಬೆಳೆಸುವ ಕೀರ್ತಿ ಈ ಸಮುದಾಯಕ್ಕೆ ಸಲ್ಲುತ್ತದೆ.ದೂರದೃಷ್ಟಿಯುಳ್ಳ, ದೊಡ್ಡ ವಿಚಾರ ಮನಸ್ಸಿನಲ್ಲಿಟ್ಟು ಕಾರ್ಯಸಾಧನೆ ಮಾಡುವವರು ಬಂಟರು. ಸಮುದಾಯ ಸಾಂಸ್ಕೃತಿಕ, ಧಾರ್ಮಿಕ, ಆರೋಗ್ಯ, ಶಿಕ್ಷಣ ಸೇರಿದಂತೆ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ’ ಎಂದರು.

ನಿವೃತ್ತ ಲೋಕಾಯುಕ್ತ ನ್ಯಾಯ ಮೂರ್ತಿ ಸಂತೋಷ್ ಹೆಗ್ಡೆ ‘ಬಂಟರ ಸೌರಭ’ ಪುಸಕ್ತ ಲೋಕಾರ್ಪಣೆ ಮಾಡಿ ದರು. ರಾಧಾ ಸುಂದರ್‌ ಶೆಟ್ಟಿ ದ್ವಾರವನ್ನು ಸಾಯಿರಾಧಾ ರವಿಶೆಟ್ಟಿ ಉದ್ಘಾಟಿಸಿದರು. ಸಮ್ಮೇಳನದ ವೇದಿಕೆಯನ್ನು ವಿಶ್ವ ಬಂಟರ ಸಂಘದ ಅಧ್ಯಕ್ಷಐಕಳ ಹರೀಶ್‌ ಶೆಟ್ಟಿ ಉದ್ಘಾಟಿಸಿದರು.‌‌

ಬಾರಕೂರು ಮಹಾಸಂಸ್ಥಾನ ಸಂತೋಷ್‌ ಗುರೂಜೀ, ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ, ಉದ್ಯಮಿ ಕೆ.ಡಿ.ಶೆಟ್ಟಿ, ಕೆ.ಎಂ.ಶೆಟ್ಟಿ, ಕಾರ್ಯಕ್ರಮದ ಅಧ್ಯಕ್ಷ ಬಿ.ಜಯಕರ್‌ ಶೆಟ್ಟಿ ಇಂದ್ರಾಳಿ, ಕಾರ್ಯಕ್ರಮ ಸಂಘಟನಾ ಸಮಿತಿಯ ಲೀಲಾಧರ್‌ ಶೆಟ್ಟಿ ಕಾಪು, ಪದ್ಮನಾಭ ಪಯ್ಯಡೆ, ಸಂತೋಷ್‌ ಶೆಟ್ಟಿ ಇನ್ನ, ಉಪೇಂದ್ರ ಶೆಟ್ಟಿ, ಸುರೇಶ್‌ ಶೆಟ್ಟಿ ಗುರ್ಮೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.