ಬ್ರಹ್ಮಾವರ(ಉಡುಪಿ ಜಿಲ್ಲೆ): ತಾಲ್ಲೂಕಿನ ಹಂಗಾರಕಟ್ಟೆ ಬಾಳೇಕುದ್ರು ಮಠದ ಹಿರಿಯ ಸ್ವಾಮೀಜಿ ನೃಸಿಂಹಾಶ್ರಮ ಸ್ವಾಮೀಜಿ (53) ಶುಕ್ರವಾರ ನಿಧನರಾದರು.
ಶುಕ್ರವಾರ ಬೆಳಿಗ್ಗೆ ಡಯಾಲಿಸಿಸ್‌ಗೆ ಕರೆದುಕೊಂಡು ಹೋಗುವಾಗ ಬ್ರಹ್ಮಾವರದ ಬಳಿ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದಾರಿಮಧ್ಯದಲ್ಲಿ ಅವರು ಕೊನೆ ಉಸಿರೆಳೆದಿದ್ದಾರೆ. ಮಠದ ಕಿರಿಯ ಶ್ರೀಗಳಾದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಅವರು ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಿದರು.
ಮಠದ ಪೂರ್ವ ಸ್ವಾಮೀಜಿಗಳಾದ ಶಂಕರಾಶ್ರಮ ಸ್ವಾಮೀಜಿ ನಿಧನದ ಬಳಿಕ ನೃಸಿಂಹಾಶ್ರಮ ಸ್ವಾಮೀಜಿ 2006ರಲ್ಲಿ ಬಾಳೆಕುದ್ರು ಮಠದ ಪೀಠಾಧಿಪತಿಗಳಾಗಿದ್ದರು. ಶೃಂಗೇರಿ ಹಿರಿಯ ಶ್ರೀಗಳ ನೇತೃತ್ವದಲ್ಲಿ ಹೆಬ್ಬರು ಮಠದ ನಾರಾಯಣಾಶ್ರಮ ಸ್ವಾಮೀಜಿ ಅವರಿಂದ ಸನ್ಯಾಸ ದೀಕ್ಷೆ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.