ADVERTISEMENT

ದಕ್ಷಿಣ ಕನ್ನಡದಲ್ಲಿ ಮುಂದಿನ ಯಕ್ಷಗಾನ ಸಮ್ಮೇಳನ: ಈ ಬಾರಿಯ ಪ್ರಮುಖ ನಿರ್ಣಯಗಳು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 14:21 IST
Last Updated 12 ಫೆಬ್ರುವರಿ 2023, 14:21 IST
ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನದ ಅಧ್ಯಕ್ಷರಾದ ಡಾ.ಎಂ.ಪ್ರಭಾಕರ ಜೋಶಿ ದಂಪತಿಯನ್ನು ಸನ್ಮಾನಿಸಲಾಯಿತು.
ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನದ ಅಧ್ಯಕ್ಷರಾದ ಡಾ.ಎಂ.ಪ್ರಭಾಕರ ಜೋಶಿ ದಂಪತಿಯನ್ನು ಸನ್ಮಾನಿಸಲಾಯಿತು.   

ಉಡುಪಿ: ಮುಂದಿನ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸುವ ನಿರ್ಣಯವನ್ನು ಭಾನುವಾರ ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಸಮಾರೋಪದಲ್ಲಿ ತೆಗೆದುಕೊಳ್ಳಲಾಯಿತು.

ಸಮ್ಮೇಳನದ ಪ್ರಮುಖ ನಿರ್ಣಯಗಳು:

*ಯಕ್ಷಗಾನ ಸಮ್ಮೇಳನದಲ್ಲಿ ಮಂಡಿಸಿದ ನಿರ್ಣಯಗಳು ಸಮ್ಮೇಳನಾಧ್ಯಕ್ಷರು ಸೂಚಿಸಿರುವ ಯಕ್ಷಗಾನ ಸಂಬಂಧಿ ಪ್ರಸ್ತಾವಗಳನ್ನು ಸರ್ಕಾರ ಪರಿಗಣಿಸಿ ಸೂಕ್ತ ಸಮಿತಿ ರಚಿಸಿ ವರದಿ ಪಡೆದು ಕಾಲಮಿತಿಗೊಳಪಟ್ಟು ಜಾರಿಗೊಳಿಸಬೇಕು.

ADVERTISEMENT

* ಸಾಂಸ್ಕೃತಿಕವಾಗಿ ಕರ್ನಾಟಕದ ಭಾಗವೇ ಆಗಿರುವ ಕಾಸರಗೋಡನ್ನು ಸರ್ಕಾರದ ಸಾಂಸ್ಕೃತಿಕ ನೀತಿಯನ್ನು ಸದಾ ವಿಶೇಷ ಪರಿಗಣನೆಯಲ್ಲಿಟ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು.

*ಸರ್ಕಾರದ ವಿವಿಧ ಅಧಿಕೃತ ಪ್ರಶಸ್ತಿ, ಸಾಂಸ್ಕೃತಿಕ ಉತ್ಸವ, ಮನ್ನಣೆ, ವಿವಿಧ ಸಮಿತಿಗಳ, ಅಕಾಡೆಮಿಗಳ ಸದಸ್ಯತ್ವಗಳಲ್ಲಿ ಕಾಸರಗೋಡಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು.

*ಸಮಗ್ರ ಕರ್ನಾಟಕದ ಯಕ್ಷಗಾನ ಮತ್ತು ಇತರ ಸಾಂಪ್ರದಾಯಿಕ ಬಯಲಾಟಗಳ ವೃತ್ತಿನಿರತ ಕಲಾವಿದರು, ರಂಗಕರ್ಮಿಗಳು ಮತ್ತು ರಂಗ ಸಹಾಯಕರಿಗೆ ಕಲ್ಯಾಣ ಕಾರ್ಯಕ್ರಮ ಯೋಜನೆ ಜಾರಿಗೊಳಿಸಿ ಸಹಾಯಧನ, ಕ್ಷೇಮನಿಧಿ, ನಿವೃತ್ತಿ ಮಾಸಾಶನ, ಆರೋಗ್ಯ ವಿಮೆ ಕೊಡಬೇಕು.

*ಸಮ್ಮೇಳನದ ಮಾದರಿಯಲ್ಲಿ ವಿಸ್ತೃತ ಆಯಾಮಗಳೊಂದಿಗೆ ನಿಶ್ಚಿತ ಅವಧಿಯ ಅಂತರದಲ್ಲಿ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ಮುಂದೆಯೂ ನಿರಂತರವಾಗಿ ನಡೆಸಬೇಕು.

*ಕಲಾವಿದರ ಗೌರವ ಮಾಸಾಶನವನ್ನು ಐದು ಸಾವಿರಕ್ಕೆ ಏರಿಸಬೇಕು.

*ಯಕ್ಷ ರಂಗಾಯಣವನ್ನು ಯಕ್ಷಗಾನ ಅಸ್ತಿತ್ವದಲ್ಲಿರುವ ಇತರ ಜಿಲ್ಲೆಗಳಿಗೂ ವಿಸ್ತರಿಸಬೇಕು.

*ರಾಷ್ಟ್ರೀಯ ನಾಟಕ ಶಾಲೆಯ ಮಾದರಿಯಲ್ಲಿ ರಾಷ್ಟ್ರೀಯ ಯಕ್ಷಗಾನ ಶಾಲೆ ರಚನೆ ಆಗಬೇಕು.

*ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನಕ್ಕೆ ನಾಂದಿ ಹಾಡಿರುವ ಸರ್ಕಾರ ಮುಂದೆ ವಿಶ್ವ ಯಕ್ಷಗಾನ ಸಮ್ಮೇಳನ ನಡೆಸಬೇಕು

*ಕೇರಳದಲ್ಲಿ ಕಥಕ್ಕಳಿ, ಒಡಿಶಾದಲ್ಲಿ ಒಡಿಸ್ಸಿ ಕಲೆಯನ್ನು ರಾಜ್ಯದ ಪ್ರಾತಿನಿಧಿಕ ಕಲೆ ಎಂದು ಪರಿಗಣಿಸಿರುವಂತೆ ಕರ್ನಾಟಕ ರಾಜ್ಯದಲ್ಲಿಯೂ ಯಕ್ಷಗಾನ ಕಲೆಯನ್ನು ಪ್ರಾತಿನಿಧಿಕ ಕಲೆ ಎಂದು ಪರಿಗಣಿಸಬೇಕು.

*ಶೈಕ್ಷಣಿಕ ಪಠ್ಯಗಳಲ್ಲಿ ಹಂತಹಂತವಾಗಿ ಪರಿಚಯಾತ್ಮಕವಾಗಿ ಯಕ್ಷಗಾನದ ವಿಷಯಗಳನ್ನು ಸೇರಿಸಬೇಕು ಔಪಚಾರಿಕ ಶಿಕ್ಷಣದಲ್ಲಿ ಡಿಪ್ಲೊಮೋ, ಸರ್ಟಿಫಿಕೇಟ್ ಕೋರ್ಸ್‌ ಆರಂಭಕ್ಕೆ ಪ್ರಾಶಸ್ತ್ಯ ನೀಡಬೇಕು.

*ಪ್ರತಿ ವರ್ಷ ನಡೆಯುವ ಯಕ್ಷಗಾನ ಸಮ್ಮೇಳನವನ್ನು ಎಲ್ಲರಿಗೂ ಅನುಕೂಲವಾಗುವಂತೆ 6 ತಿಂಗಳು ಮೊದಲೇ ದಿನಾಂಕ ನಿರ್ಧರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.