ADVERTISEMENT

ಬ್ರಹ್ಮಾವರ: ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರುಪಾಲು

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 8:14 IST
Last Updated 3 ಜುಲೈ 2020, 8:14 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬ್ರಹ್ಮಾವರ (ಉಡುಪಿ): ಬಾರ್ಕೂರು ಹಾಲೆಕೊಡಿ ಸಮೀಪದ ಹೊಳೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ಶುಕ್ರವಾರ ಮೃತಪಟ್ಟಿದ್ದಾರೆ‌.

ಹೇರಾಡಿಯ ಹರ್ಷ (24) ಹಾಗೂ ಕಾರ್ತಿಕ್ (17) ಸಾವಿಗೀಡಾದ ಯುವಕರಾಗಿದ್ದಾರೆ.

ಗುರುವಾರ ಸಂಜೆ ಮೀನು ಹಿಡಿಯಲು ಬಲೆ ಹಾಕಿದ್ದ ಯುವಕರು ಶುಕ್ರವಾರ ಬಲೆಯನ್ನು ಎಳೆಯಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ADVERTISEMENT

ಸ್ಥಳೀಯರ ನೆರವಿನೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.