ADVERTISEMENT

ಮಡಗಾವ್ – ಮಂಗಳೂರು ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 16:22 IST
Last Updated 8 ಏಪ್ರಿಲ್ 2021, 16:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಮುಂಗಾರು ಹಾಗೂ ಮುಂಗಾರು ನಂತರದ ಅವಧಿಯಲ್ಲಿ 07107 / 07108 ಮಡಗಾವ್ ಜಂಕ್ಷನ್ –ಮಂಗಳೂರು ಸೆಂಟ್ರಲ್ ಮಾರ್ಗದಲ್ಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲಿದೆ.

ಮುಂಗಾರು ಹೊರತಾದ ಅವಧಿ:

07107 ಮಡಗಾವ್ ಜಂಕ್ಷನ್ –ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್‌ ರೈಲು ಭಾನುವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಏ.12ರಿಂದ ಜೂನ್ 9ರವರೆಗೆ ಮಡಗಾವ್ ಜಂಕ್ಷನ್‌ನಿಂದ ಬೆಳಿಗ್ಗೆ 5.10ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ 12.15ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ.

ADVERTISEMENT

07108 ರೈಲು ಮಧ್ಯಾಹ್ನ 2.45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಅದೇ ದಿನ ರಾತ್ರಿ 10.10ಕ್ಕೆ ಮಡಗಾವ್ ಜಂಕ್ಷನ್ ತಲುಪಲಿದೆ.

ಮುಂಗಾರು ಅವಧಿ:

07107 ರೈಲು ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಜೂನ್ 30ರವರೆಗೆ ಬೆಳಿಗ್ಗೆ 5.10ಕ್ಕೆ ಮಡಗಾವ್‌ನಿಂದ ಹೊರಟು ಅದೇದಿನ 12.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

07108 ರೈಲು ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 2.45ಕ್ಕೆ ಹೊರಟು ಅದೇ ದಿನ ರಾತ್ರಿ 10.10ಕ್ಕೆ ಮಡಗಾವ್ ತಲುಪಲಿದೆ.

ರೈಲು ಅನ್ಸೋಟಿ, ಕಾರವಾರ,ಅಂಕೋಲ, ಗೋಕರ್ಣ ರೋಡ್‌, ಕುಮಟಾ, ಹೊನ್ನಾವರ, ಮಂಕಿ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರು, ಸೇನಾಪುರ, ಕುಂದಾಪುರ, ಬಾರ್ಕೂರು, ಉಡುಪಿ, ಮೂಲ್ಕಿ, ಸುರತ್ಕಲ್‌ ಹಾಗೂ ಮಂಗಳೂರಿನಲ್ಲಿ ನಿಲುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.