ಉಡುಪಿ: ಜನಗಣಮನ ರಾಷ್ಟ್ರಗೀತೆಯಾದರೆ ಗಾಯತ್ರಿ ಮಂತ್ರ ವಿಶ್ವಗೀತೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದರು.
ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಆರಂಭವಾದತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು ಗಾಯತ್ರಿ ಮಂತ್ರಕ್ಕೆ ಜಗತ್ತಿನ ಕಲ್ಯಾಣ ಮಾಡುವ ಶಕ್ತಿಯಿದ್ದು, ಪ್ರತಿದಿನ ಬ್ರಾಹ್ಮಣರು ಜಪಿಸಬೇಕು ಎಂದರು.
ತುಳು ಶಿವಳ್ಳಿ ಬ್ರಾಹ್ಮಣ ಸಮಾಜವು ಸಂಕುಚಿತ ಸಂಘಟನೆ ಎಂಬ ಭಾವನೆ ಕೆಲವರಲ್ಲಿದೆ.ದೇವಸ್ಥಾನಕ್ಕೆ ಗರ್ಭಗುಡಿ, ಕುಂಭ ಪ್ರತಿಷ್ಠೆ, ಮೇಲೊಂದು ದೊಡ್ಡ ಪ್ರತಿಷ್ಠೆ ಇರುವಂತೆ,ಹಿಂದೂ ಸಮಾಜದಲ್ಲಿ ಬ್ರಾಹ್ಮಣ ಸಮುದಾಯ, ಅದರೊಳಗೊಂದು ತುಳು ಶಿವಳ್ಳಿ ಬ್ರಾಹ್ಮಣ ಸಮಾಜ ಇದೆ ಎಂದರು.
ಎಲ್ಲ ಬ್ರಾಹ್ಮಣ ಸಮುದಾಯಗಳು ಒಂದಕ್ಕೊಂದು ಪೂರಕವಾಗಿದೆವೆಯೇ ಹೊರತು ಬೇರೆಯಾಗಿಲ್ಲ. ಹಿಂದೂ ಸಮಾಜ ಗಟ್ಟಿಯಾಗಬೇಕಾದರೆ ಶಿವಳ್ಳಿ, ಹವ್ಯಕ ಹಾಗೂ ಕೋಟ ಬ್ರಾಹ್ಮಣರು ಸಂಘಟಿತರಾಗಬೇಕು ಎಂದು ಶ್ರೀಗಳು ಕರೆ ನೀಡಿದರು.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಮೇಲೆವಿಶೇಷ ಅಭಿಮಾನ ಇರಲಿ. ತಂದೆ ತಾಯಿಗೆ
ಕೊಡುವ ಗೌರವ, ಪ್ರೀತಿ, ಪ್ರೇಮ ತುಳು ಭಾಷೆಗೂ ಸಿಗಲಿ. ತುಳು ಹೆತ್ತ ತಾಯಿ ಇದ್ದಂತೆ ಎಂದು ಶ್ರೀಗಳು ವ್ಯಾಖ್ಯಾನಿಸಿದರು.
ಧಾರ್ಮಿಕ ಸಮಾವೇಶ, ಉದ್ಯಮ ಶೀಲತಾ ಸಮಾವೇಶ, ಶೈಕ್ಷಣಿಕ ಸಮಾವೇಶ, ‘ತುಳು ಶಿವಳ್ಳಿ ಸಮಾಜ ಅಂದು ಇಂದು ಮುಂದು’ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಿತು.
ಪಲಿಮಾರು ವಿದ್ಯಾಧೀಶ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ, ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ, ಪಲಿಮಾರು ಕಿರಿಯ ಯತಿ ವಿದ್ಯಾರಾಜೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.