ADVERTISEMENT

ಉಡುಪಿ ಮಲ್ಲಿಗೆಗೆ ಬರ

ಚಳಿಯಿಂದ ಇಳುವರಿ ಕುಂಠಿತ: ಅಟ್ಟಿಗೆ ₹ 2400 ದರ

ಪ್ರಕಾಶ ಸುವರ್ಣ ಕಟಪಾಡಿ
Published 15 ಜನವರಿ 2023, 6:23 IST
Last Updated 15 ಜನವರಿ 2023, 6:23 IST
ಉಡುಪಿ ಮಲ್ಲಿಗೆ
ಉಡುಪಿ ಮಲ್ಲಿಗೆ   

ಶಿರ್ವ: ಕರಾವಳಿಯಲ್ಲಿ ಉಡುಪಿ ಮಲ್ಲಿಗೆ (ಶಂಕರಪುರ ಮಲ್ಲಿಗೆ) ದರ ಏಕಾಏಕಿ ಗಗನಕ್ಕೇರಿದೆ. ಉಡುಪಿ ಮಲ್ಲಿಗೆ ಅಟ್ಟಿಯೊಂದಕ್ಕೆ ₹ 2400 ದಾಖಲೆಯ ದರ ಶನಿವಾರ ಮಾರುಕಟ್ಟೆಯಲ್ಲಿ ಕಂಡು ಬಂದಿದ್ದು ಗ್ರಾಹಕರು ಪರದಾಡಿದರು.

ಮಕರ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಮಲ್ಲಿಗೆಗೆ ಬೇಡಿಕೆ ಹೆಚ್ಚಾಗಿತ್ತು. ಆದರೆ ಇಳುವರಿ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಹೂ ಲಭ್ಯವಿಲ್ಲದ ಕಾರಣ ಗ್ರಾಹಕರು ನಿರಾಸೆಗೊಂಡರು. ಕೆಲವರು, ಬೆಳೆಗಾರರ ಮನೆಗೆ ಹೋಗಿ ಮುಂಗಡವಾಗಿ ಹಣತೆತ್ತು ಅಟ್ಟಿಗಳನ್ನು ಬುಕ್ ಮಾಡಿದ್ದರು.

ಸಾಮಾನ್ಯವಾಗಿ ₹ 200ರಿಂದ
₹ 300ಕ್ಕೆ ದೊರೆಯುತ್ತಿದ್ದ ಮಲ್ಲಿಗೆ ಚೆಂಡಿಗೆ ಶನಿವಾರ ₹ 600ರಿಂದ ₹ 800ರ ವರೆಗೆ ಬೆಲೆ ಇತ್ತು. 800 ಮೊಗ್ಗುಗಳ ಒಂದು ಚೆಂಡು ₹ 600ಕ್ಕೆ ಬಿಕರಿಯಾಯಿತು.

ADVERTISEMENT

ಚಳಿಯ ವಾತಾವರಣದಿಂದಾಗಿ ಮೂರು–ನಾಲ್ಕು ದಿನಗಳಿಂದ ಹೂಗಳ ಲಭ್ಯತೆ ಕಡಿಮೆ ಇತ್ತು. ಹೀಗಾಗಿ ಒಂದೇ ದರ ಮುಂದುವರಿದಿತ್ತು. ಬೆಳೆಗಾರರು ಗಿಡಗಳಲ್ಲಿ ಮುತ್ತು ಹುಡುಕಿದಂತೆ ಹೂವಿನ ಮೊಗ್ಗು ಹುಡುಕಿ ತಂದು ಪೋಣಿಸಬೇಕಾಗಿತ್ತು. ಬಿಸಿಲು ಹೆಚ್ಚಾ ದರೆ ಇಳುವರಿ ಹೆಚ್ಚುತ್ತದೆ ಎಂದು ಮೂಡುಬೆಳ್ಳೆಯ ಅನಿಲ್ ಆಳ್ವ ಹೇಳಿದರು.

ಉಡುಪಿ ಮಲ್ಲಿಗೆ ವಿರಳವಾಗಿರು ವುದರಿಂದ ದೂರದ ಭಟ್ಕಳ ಮಲ್ಲಿಗೆ ಹೆಚ್ಚು ಬಿಕರಿಯಾಗುತ್ತಿದೆ. ಭಟ್ಕಳ ಮಲ್ಲಿಗೆಗೆ ಅಟ್ಟಿಗೆ ₹ 1600 ದರ ಇದ್ದು ಒಂದು ಚೆಂಡಿಗೆ ₹ 400 ದರ ಇದೆ. ಉಡುಪಿ ಮಲ್ಲಿಗೆ ಇಲ್ಲದಿದ್ದಾಗ ಅನಿವಾರ್ಯವಾಗಿ ಭಟ್ಕಳ ಮಲ್ಲಿಗೆ ಮಾರಾಟ ಮಾಡಬೇಕಾಗಿದೆ ಎನ್ನುತ್ತಾರೆ ವ್ಯಾಪಾರಿ ಆರಿಫ್ ಸರಕಾರಿಗುಡ್ಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.