ಬ್ರಹ್ಮಾವರ: ಕುಂದಾಪುರದ ಜನ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಟಪಾಡಿಯ ವಿಜಯ ಬಾಲನಿಕೇತನ ನಿಲಯದ ಆರ್ಥಿಕ ಅಶಕ್ತ 65 ವಿದ್ಯಾರ್ಥಿಗಳಿಗೆ ಎರಡು ಜತೆ ಉಡುಪುಗಳನ್ನು ನೀಡಲಾಯಿತು.
ವಿಜಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಿರೀಶ್ಚಂದ್ರ ಆಚಾರ್ಯ ಮಾತನಾಡಿ, ಮಕ್ಕಳಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ಶಿಕ್ಷಣ, ಹೊಟ್ಟೆ ಹಸಿವಿಗೆ ಆಹಾರ, ಹಾಗೇ ಮೈ ಮುಚ್ಚಿಕೊಳ್ಳಲು ಉಡುಪು. ಆ ಉಡುಪನ್ನು ಜನಸೇವಾ ಟ್ರಸ್ಟ್‌ನವರು ಮಕ್ಕಳಿಗೆ ನೀಡಿರುವುದು ಸಂತೋಷಉಂಟು ಮಾಡಿದೆ ಎಂದರು.
ಜನ ಸೇವಾ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಐಶ್ವರ್ಯಾ ಶೆಟ್ಟಿ ಮಾತನಾಡಿ, ‘ಜೀವನದಲ್ಲಿ ತಂದೆ –ತಾಯಿಯ ನಂತರ ಪ್ರಮುಖ ಪಾತ್ರ ಬೀರುವವರು ಶಿಕ್ಷಕರು. ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. ಶಿಕ್ಷಕ ತನ್ನ ಜ್ಞಾನದ ಬೆಳಕಿನಿಂದ ವಿದ್ಯಾರ್ಥಿಯ ಜೀವನದಲ್ಲಿ ಇರುವ ಕತ್ತಲೆಯನ್ನು ಹೋಗಲಾಡಿಸಿ ಬೆಳಕಿನೆಡೆಗೆ ಕೊಂಡೊಯ್ಯುತ್ತಾನೆ’ ಎಂದರು.
‘ಇಲ್ಲಿನ ವಿದ್ಯಾರ್ಥಿಗಳು ವಿದ್ಯೆಯ ಸಿಹಿಯನ್ನು ಸವಿಯಲು ಬೇರೆ ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬಂದು ಜೇನಿನಗೂಡಿನ ಹಾಗೆ ಸೇರಿದ್ದೀರಿ. ಎಲ್ಲರೂ ಸೌಹಾರ್ದದಿಂದ ಇದ್ದು, ಉತ್ತಮ ಶಿಕ್ಷಣ ಪಡೆದು ಮುಂದೆ ಶ್ರೇಷ್ಠ ಪ್ರಜೆಯಾಗಿ, ಇತರರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಲಕ್ಷ್ಮಿ ನಾರಾಯಣ ಶೆಟ್ಟಿ, ಇಂದ್ರಾಳಿ, ರೇಣುಕಾ ಸದಾಶಿವ ಶೆಟ್ಟಿ, ಅಕ್ಷತಾ ಸಾಯಿಪ್ರಸಾದ್ ಚೌಟ ಉಡುಪುಗಳನ್ನು ವಿತರಿಸಿದರು. ಸೂರ್ಯನಾರಾಯಣ ಗಾಣಿಗ, ವಿಶ್ವನಾಥ ಶೆಟ್ಟಿ ಇದ್ದರು.
ವಿಜಯನಿಕೇತನದ ಟ್ರಸ್ಟಿ ಅಶೋಕ ಕುಮಾರ್ ಶೆಟ್ಟಿ ಮಟಪಾಡಿ ನಿರೂಪಿಸಿದರು. ಮೇಲ್ವಿಚಾರಕ ಜಯರಾಮ ನಾಯರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.