
ಶೀರೂರು ಮಠದ ವೇದವರ್ಧನತೀರ್ಥ ಶ್ರೀಪಾದ ಸ್ವಾಮೀಜಿ
ಉಡುಪಿ: ‘ಶೀರೂರು ಮಠದ ಪರ್ಯಾಯ ಮಹೋತ್ಸವದ ಅಂಗವಾಗಿ ಇದೇ 13ರಂದು ಹೊರೆ ಕಾಣಿಕೆ ನೀಡಲಾಗುವುದು’ ಎಂದು ‘ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ’ ಅಧ್ಯಕ್ಷ ಕೆ. ಅಬೂಬಕ್ಕರ್ ಪರ್ಕಳ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪುರಾತನ ಕಾಲದಿಂದ ಶ್ರೀ ಕೃಷ್ಣ ಮಠದಲ್ಲಿ ನಡೆದು ಬರುತ್ತಿರುವ ಹಿಂದೂ-ಮುಸ್ಲಿಮರ ಸೌಹಾರ್ದ ಹಾಗೂ ಏಕತೆ ಜೀವಂತವಾಗಿರಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ಅನುಮತಿ ನೀಡಿಲ್ಲ: ‘ಹೊರೆಕಾಣಿಕೆ ನೀಡುವುದಾಗಿ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ಸದಸ್ಯರು ಪ್ರಕಟಿಸಿದ್ದು, ಅದಕ್ಕೆ ಸ್ವಾಗತ ಸಮಿತಿ ಅನುಮತಿ ನೀಡಿಲ್ಲ’ ಎಂದು ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ, ಶಾಸಕ ಯಶ್‌ಪಾಲ್ ಸುವರ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಸಮಿತಿಯವರು ಈವರೆಗೂ ಹೊರೆಕಾಣಿಕೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಮಠದ ವತಿಯಿಂದಲೂ ಹೊರೆಕಾಣಿಕೆ ನೀಡುವಂತೆ ಮನವಿ ಮಾಡಿಲ್ಲ’ ಎಂದು ತಿಳಿಸಿದ್ದಾರೆ.
ಶೀರೂರು ಮಠಾಧೀಶ ವೇದವರ್ಧನ ತೀರ್ಥರ ಪ್ರಥಮ ಪರ್ಯಾಯವು ಇದೇ 18ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.