ADVERTISEMENT

ಉಡುಪಿ | ಲಕ್ಷಾಂತರ ಮೌಲ್ಯದ ಚಿನ್ನ ಕಳವು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:57 IST
Last Updated 10 ಸೆಪ್ಟೆಂಬರ್ 2025, 7:57 IST
ಕಳ್ಳತನ ನಡೆದ ಅಂಗಡಿಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು
ಕಳ್ಳತನ ನಡೆದ ಅಂಗಡಿಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು   

ಉಡುಪಿ: ನಗರದ ಚಿತ್ತರಂಜನ್‌ ಸರ್ಕಲ್‌ ಬಳಿಯ ಜ್ಯುವೆಲರಿ ವರ್ಕ್‌ಶಾಪ್‌ಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನ ಕಳವು ಮಾಡಿದ್ದಾರೆ.

ಚಿತ್ತರಂಜನ್‌ ಸರ್ಕಲ್‌ನ ಮಾರುತಿ ವೀಥಿಕಾ ಬಳಿಯ ಕಟ್ಟಡದ ನೆಲಮಹಡಿಯಲ್ಲಿದ್ದ ವೈಭವ ಗೋಲ್ಡ್‌ ಆ್ಯಂಡ್‌ ಸಿಲ್ವರ್‌ ಮೆಲ್ಟಿಂಗ್‌ ಆ್ಯಂಡ್‌ ರಿಫೈನರಿ ಅಂಗಡಿಯ ಶಟರ್‌ನ ಬೀಗವನ್ನು ನಕಲಿ ಕೀ ಬಳಸಿ ತೆರೆದು ಒಳ ನುಗ್ಗಿದ ಕಳ್ಳರು, ರಿಫೈನರಿ ಮೆಷಿನ್‌ನಲ್ಲಿ ಇರಿಸಿದ್ದ ಸುಮಾರು 680 ಗ್ರಾಂ ಚಿನ್ನ, ಕಪಾಟಿನಲ್ಲಿಟ್ಟಿದ್ದ ಸುಮಾರು 200 ಗ್ರಾಂ ಚಿನ್ನ, 5 ಕೆ.ಜಿ. ತೂಕದ ಬೆಳ್ಳಿಯ ಗಟ್ಟಿಗಳು ಹಾಗೂ ₹1.50 ಲಕ್ಷ ನಗದನ್ನು ಕಳವು ಮಾಡಿದ್ದಾರೆ ಎಂದು ದೂರಲಾಗಿದೆ.

ಕೆಲಸಗಾರ ಆದರ್ಶ ಎಂಬುವವರು ಮಂಗಳವಾರ ಬೆಳಿಗ್ಗೆ ಅಂಗಡಿ ತೆರೆಯಲು ಬಂದಾಗ, ಶಟರ್‌ ಅರ್ಧ ತೆರೆದಿದ್ದು, ಪರಿಶೀಲಿಸಿದಾಗ ಕಳ್ಳತನವಾಗಿರುವ ವಿಷಯ ತಿಳಿದಿದೆ. ಒಟ್ಟು ಅಂದಾಜು ₹95.71 ಲಕ್ಷ ಮೌಲ್ಯದ ಸೊತ್ತು ಕಳವಾಗಿದೆ ಎಂದು ಅಂಗಡಿ ಮಾಲೀಕ ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ವೈಭವ್‌ ಮೋಹನ ಘಾಟಗೆ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.