ADVERTISEMENT

ವಿಡಿಯೊ: DCಯೇ ತಾಯಿ, ಅಧಿಕಾರಿಗಳೇ ಸಂಬಂಧಿಕರು: ಉಡುಪಿಯಲ್ಲೊಂದು ವಿಶಿಷ್ಟ ಮದುವೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 14:21 IST
Last Updated 12 ಡಿಸೆಂಬರ್ 2025, 14:21 IST

ವಿಶಿಷ್ಟ ಮದುವೆಗೆ ಉಡುಪಿಯ ನಿಟ್ಟೂರಿನ ರಾಜ್ಯ ಮಹಿಳಾ ನಿಲಯ ಸಾಕ್ಷಿಯಾಗಿದೆ. ಮಹಿಳಾ ನಿಲಯದ ನಿವಾಸಿಗಳಾದ ಸುಶೀಲಾ ಮತ್ತು ಮಲ್ಲೇಶ್ವರಿ ಅವರ ವಿವಾಹವು ಶುಕ್ರವಾರ ನೆರವೇರಿತು. ಸುಶೀಲಾ ಅವರನ್ನು, ಹಾಸನ ಜಿಲ್ಲೆಯ ಕೃಷ್ಣಾಪುರದ ನಾಗರಾಜ ವರಿಸಿದರೆ, ಮಲ್ಲೇಶ್ವರಿ ಅವರ ಕೈ ಹಿಡಿದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಬಪ್ಪನಾಡಿನ ಸಂಜಯ ಪ್ರಭು. ವಧುಗಳನ್ನು ಧಾರೆ ಎರೆದುಕೊಟ್ಟವರು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.