ADVERTISEMENT

ತರಕಾರಿ ಬೆಲೆ ಅಲ್ಪ ಇಳಿಕೆ: ಮಾಂಸ ದರ ಸ್ಥಿರ

ಸಂಕ್ರಾಂತಿಗೆ ಎಳ್ಳು, ಬೆಲ್ಲ ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 14:22 IST
Last Updated 12 ಜನವರಿ 2023, 14:22 IST
ತರಕಾರಿ ಮಾರುಕಟ್ಟೆ
ತರಕಾರಿ ಮಾರುಕಟ್ಟೆ   

ಉಡುಪಿ: ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಕೊಂಚ ಇಳಿಕೆಯಾಗಿದೆ. ಕಳೆದವಾರ ಶತಕದ ಗಡಿ ದಾಟಿದ್ದ ತೊಂಡೆಕಾಯಿ ಸದ್ಯ ₹ 80ಕ್ಕೆ ಇಳಿಕೆಯಾಗಿದೆ.

ಬೆಂಡೆಕಾಯಿ ದರ ಬಹುತೇಕ ಸ್ಥಿರತೆ ಕಾಯ್ದುಕೊಂಡಿದ್ದು ₹ 60ರಿಂದ 70 ದರ ಇದ್ದರೆ, ಕರಾವಳಿಯ ಬಿಳಿ ಬೆಂಡೆ ಕೆ.ಜಿಗೆ 100 ಇತ್ತು.

ಕ್ಯಾರೆಟ್‌ ಹಾಗೂ ಬೀನ್ಸ್‌ ಅಗ್ಗವಾಗಿದ್ದು ದರ ಹೆಚ್ಚಳವಾಗಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ₹ 35ರಿಂದ 40ಕ್ಕೆ ಮಾರಾಟವಾಗುತ್ತಿತ್ತು. ಬೀನ್ಸ್ ಕೆ.ಜಿಗೆ 40 ರಿಂದ 50ಕ್ಕೆ ಸಿಗುತ್ತಿದೆ. ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಕ್ಯಾರೆಟ್ ಹಾಗೂ ಬೀನ್ಸ್ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವ ಕಾರಣ ಬೆಲೆ ಕುಸಿತವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ADVERTISEMENT

ಕುಂಬಳಕಾಯಿ ಕೆಜಿಗೆ 15 ರಿಂದ 25, ಸಿಹಿ ಗೆಣಸು 40, ಗೋರಿಕಾಯಿ 50, ಉದ್ದ ಬೀನ್ಸ್‌ 60, ಗೆಡ್ಡೆಕೋಸು 35, ಗ್ರೀನ್ ಪೀಸ್‌ 50, ಸಾಂಬಾರ್ ಸೌತೆ 35, ಮೂಲಂಗಿ 30, ಹಸಿರು ಉದ್ದ ಬದನೆಕಾಯಿ 35, ಗುಂಡು ಬದನೆಕಾಯಿ 35, ಕರಾವಳಿಯ ಮಟ್ಟುಗುಳ್ಳು ₹ 130, ಎಲೆಕೋಸು 15, ಹೂಕೋಸು 30 ದರ ಇದೆ.

ಆಲೂಗಡ್ಡೆಯ ದರ ನಿಧಾನವಾಗಿ ಏರಿಕೆ ಕಾಣುತ್ತಿದ್ದು ಕಳೆದವಾರ 35 ರಿಂದ 40 ಇದ್ದ ದರ ಸದ್ಯ 50ಕ್ಕೆ ಏರಿಕೆಯಾಗಿದೆ. ಟೊಮೆಟೊ ದರ ಕೂಡ ಏರುಮುಖವಾಗಿದ್ದು 20 ರಿಂದ 30ಕ್ಕೆ ಜಿಗಿದಿದೆ. ಈರುಳ್ಳಿ ದರ ಸ್ಥಿರವಾಗಿದ್ದು ಗ್ರಾಹಕರು ‌ಕೆ.ಜಿಗೆ 35ಕ್ಕೆ ಖರೀದಿ ಮಾಡಿದರು.

ಹಸಿರು ಮೆಣಸಿಕ ಕಾಯಿ ದರವೂ 50ರಿಂದ 65ಕ್ಕೆ ಹೆಚ್ಚಾಗಿದೆ. ಹಸಿ ಶುಂಠಿ 55, ಕ್ಯಾಪ್ಸಿಕಂ 60, ಹಾಗಲಕಾಯಿ ₹ 50, ಪಡುವಲಕಾಯಿ 30, ಸೋರೆಕಾಯಿ 35, ಈರೇಕಾಯಿ ದರ 70, ಡೆಲ್ಲಿ ಕ್ಯಾರೆಟ್‌ 50, ಇಂಗ್ಲಿಷ್ ಸೌತೆಕಾಯಿ 60, ಸಾಮಾನ್ಯ ಸೌತೆ 35 ಇದ ಇತ್ತು.

ಸೊಪ್ಪು ದಂಟು ಕಟ್ಟಿಗೆ ₹ 10, ಕೊತ್ತಮರಿ ₹ 5, ಕರಿಬೇವು ₹ 5, ಪುದಿನ ₹5, ಸಬ್ಬಸ್ಸಿಗೆ ₹5, ಮೆಂತೆ ₹ 6, ಪಾಲಕ್‌ ₹5 ದರ ಇತ್ತು.

ಹಣ್ಣುಗಳ ದರ: ಮಾರುಕಟ್ಟೆಗೆ ದ್ರಾಕ್ಷಿ ಲಗ್ಗೆಇಟ್ಟಿದ್ದು ಬಿಳಿ ದ್ರಾಕ್ಷಿ ಕೆ.ಜಿಗೆ 100ರಿಂದ 120 ಇದ್ದರೆ ಕಪ್ಪು ದ್ರಾಕ್ಷಿ 160 ಇತ್ತು. ಕಿತ್ತಲೆ, ಮೋಸಂಬಿ ಕೆ.ಜಿಗೆ 70 ರಿಂದ 80, ಏಲಕ್ಕಿ ಬಾಳೆಹಣ್ಣು 70, ಸೇಬು (ಕಿನ್ನೂರು) ₹ 140, ರಾಯಲ್ ಗಾಲಾ ₹ 250, ರೆಡ್ ಡಿಲಿಷಿಯಸ್‌ ₹240, ಫುಜಿ ₹ 250, ಸಪೋಟ ₹50, ಸೀಬೆಹಣ್ಣು ₹100, ಮಸ್ಕ್ ಮೆಲನ್ ₹ 40, ದಾಳಿಂಬೆ ₹ 200, ಪೈನಾಪಲ್‌ 30, ಪಪ್ಪಾಯ ₹40, ವಾಟರ್ ಮೆಲನ್ ₹ 15ರಿಂದ ₹20 ದರ ಇತ್ತು.

ಮಾಂಸದ ದರದಲ್ಲಿ ಹೆಚ್ಚು ಏರಿಳಿತವಾಗಿಲ್ಲ. ಕುರಿ ಮಾಂಸ ಕೆಜಿಗೆ 650 ರಿಂದ 700 ಇದ್ದರೆ, ಕೋಳಿ ಮಾಂಸ ಬ್ರಾಯ್ಲರ್ ಕೆ.ಜಿಗೆ 200, ಟೈಸನ್ 270, ನಾಟಿಕೋಳಿ 450 ದರ ಇತ್ತು. ಮೊಟ್ಟೆಯ ದರವೂ ಏರುಗತಿಯಲ್ಲಿದ್ದು ಚಿಲ್ಲರೆ ಮಾರುಕಟ್ಟೆಯಲ್ಲಿ 7ಕ್ಕೆ ಮಾರಾಟವಾದರೆ, ಸಗಟು ಮಾರುಕಟ್ಟೆಯಲ್ಲಿ ₹ 6 ರಿಂದ ₹6.50 ದರವಿತ್ತು.

ಸಂಕ್ರಾಂತಿಗೆ ಖರೀದಿ ಜೋರು
ಸಂಕ್ರಾಂತಿ ಹಬ್ಬ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಳಿಗೆಗಳಲ್ಲಿ ಎಳ್ಳು, ಬೆಲ್ಲ, ಕೊಬ್ಬರಿ, ಶೇಂಗಾ ಬೀಜ ಸೇರಿದಂತೆ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಜೋರಾಗಿ ನಡೆಯುತ್ತಿದೆ. ರಿಲಯನ್ಸ್‌ ಹಾಗೂ ಡಿಮಾರ್ಟ್‌ನಂತಹ ಮಾಲ್‌ಗಳಲ್ಲಿ ಸಂಕ್ರಾಂತಿ ಹಬ್ಬದ ಸಾಮಗ್ರಿಗಳ ಖರೀದಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.