ADVERTISEMENT

ಧನಸಹಾಯ ನೆಪದಲ್ಲಿ ಮಹಿಳೆಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 7:12 IST
Last Updated 31 ಜುಲೈ 2025, 7:12 IST
<div class="paragraphs"><p>ಹಣ </p></div>

ಹಣ

   

ಬ್ರಹ್ಮಾವರ: ವಾಟ್ಸಪ್‌ ಸಂದೇಶ ನೋಡಿ ಚೇರ್ಕಾಡಿ ಗ್ರಾಮದ ಮಹಿಳೆಯೊಬ್ಬರು ₹30 ಸಾವಿರ ಕಳೆದುಕೊಂಡಿದ್ದಾರೆ.

ಉಷಾ ಎಂಬುವರು ಮಗುವಿನ ಹೃದಯ ಸಂಬಂಧಿ ಕಾಯಿಲೆ ಬಗ್ಗೆ ಚಿಕಿತ್ಸೆ ನೆರವಿಗಾಗಿ ₹10 ಲಕ್ಷ ಹಣಕ್ಕಾಗಿ ಮನವಿ ಮಾಡಿ ವಾಟ್ಸಪ್‌ ಗ್ರೂಪ್‌ನಲ್ಲಿ ಸಂದೇಶ ಹರಿಬಿಟ್ಟಿದ್ದರು.

ADVERTISEMENT

ಈ ಬಗ್ಗೆ ವ್ಯಕ್ತಿಯೋರ್ವ ಮೊಬೈಲ್‌ ಸಂಖ್ಯೆ 8660377304 ನಿಂದ ಕರೆ ಮಾಡಿ ₹3 ಲಕ್ಷ ಕಳುಹಿಸುತ್ತೇನೆ, ಜಿಎಸ್‌ಟಿ ಬಗ್ಗೆ ₹30 ಸಾವಿರ ಕಳುಹಿಸಲು ತಿಳಿಸಿದ್ದ. ಇದನ್ನು ನಂಬಿದ ಉಷಾ ಅವರು ಗೂಗಲ್‌ ಪೇ ಮೂಲಕ ಹಣ ಕಳುಹಿಸಿದ್ದರು. ನಂತಹ ಅವರು ಮೋಸ ಹೋಗಿರುವ ಅರಿವಾಗಿ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.