ಬ್ರಹ್ಮಾವರ: 37ವರ್ಷಗಳಿಂದ ಪ್ರತಿನಿತ್ಯ ಯೋಗ ರೂಢಿಸಿಕೊಂಡು ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿರುವ ಯಡ್ತಾಡಿಯ ಪ್ರಗತಿಪರ ಕೃಷಿಕ ಸತೀಶ್ ಕುಮಾರ್ ಶೆಟ್ಟಿ.
ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಒಂದು ಗಂಟೆ ಪ್ರಾಣಾಯಾಮ, ಶೀರ್ಷಾಸನ, ಯೋಗಮುದ್ರಾಸನ, ವೀರಾಸನ, ಪದ್ಮಾಸನ ಮುಂತಾದ ಧ್ಯಾನ, ಆಸನಗಳನ್ನು ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. ಯೋಗದಿಂದ ನೆನಪು ಶಕ್ತಿ ಹೆಚ್ಚುವುದಲ್ಲದೇ, ತಾಳ್ಮೆ, ಏಕಾಗ್ರತೆ ಆಸಕ್ತಿ ಹೆಚ್ಚುತ್ತದೆ ಎನ್ನುವ ಶೆಟ್ಟರು ಹಲವಾರು ಯೋಗ ಸ್ಪರ್ಧೆಗೂ ಹೋಗಿ ಬಹುಮಾನಗಳನ್ನು ಪಡೆದಿದ್ದಾರೆ. ಆಸುಪಾಸಿನವರಿಗೂ ಯೋಗ ಗುರುವಾಗಿದ್ದಾರೆ. ಯೋಗವನ್ನು ನಂಬಿದಲ್ಲಿ ಕೊರೊನಾ–ಕೋವಿಡ್ ಮುಂತಾದ ಸಾಂಕ್ರಾಮಿಕ ರೋಗಗಳಿಂದಲೂ ದೂರವಿರಬಹುದು. ಯೋಗ ಮಾಡುವವರು ನಿಯಮಿತ ಆಹಾರವನ್ನು ಸೇವಿಸಬೇಕು. ಇದರಿಂದರೋಗನಿರೋಧಕ ಶಕ್ತಿ ಕೂಡಾ ಹೆಚ್ಚುತ್ತದೆ ಎಂದು ಅವರು ತಿಳಿಸಿದರು.
ಯೋಗದಿಂದ ಹಲವಾರು ಲಾಭಗಳಿವೆ. ಮಕ್ಕಳಲ್ಲಿ ಬಾಲ್ಯದಲ್ಲಿಯೇ ಯೋಗದ ಮಹತ್ವವನ್ನು ತಿಳಿಸಲು ಶಾಲಾ ಪಠ್ಯ ಪುಸ್ತಕಗಳಲ್ಲಿ ಯೋಗವನ್ನು ಅಳವಡಿಸಬೇಕು ಎಂದು ಅವರು ತಿಳಿಸಿದರು. ಯೋಗ ಮಾಹಿತಿಗೆ 9448159645 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.