ADVERTISEMENT

ಯಕ್ಷ ಪಂಚಮಿ: ಯಕ್ಷಗಾನ ಪ್ರದರ್ಶನ 18ರಿಂದ

ಹಳ್ಳಾಡಿ ಜಯರಾಮ ಶೆಟ್ಟಿ ಅವರಿಗೆ ಯಕ್ಷ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 14:41 IST
Last Updated 16 ಜುಲೈ 2022, 14:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಉಡುಪಿ: ತಲ್ಲೂರ್ಸ್‌ ಫ್ಯಾಮಿಲಿ ಟ್ರಸ್ಟ್‌, ಕರ್ನಾಟಕ ಜಾನಪದ ಪರಿಷತ್ತು ಸಹಕಾರದೊಂದಿಗೆ ಹಟ್ಟಿಯಂಗಡಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಜುಲೈ 18ರಿಂದ 22ರವರೆಗೆ ಯಕ್ಷಪಂಚಮಿ ಕಾರ್ಯಕ್ರಮ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ ಯಕ್ಷ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಎಂದು ಹಟ್ಟಿಯಂಗಡಿ ಮೇಳದ ಸಂಚಾಲಕ ರಂಜಿತ್ ಶೆಟ್ಟಿ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಮಠದ ರಾಜಾಂಗಣದಲ್ಲಿ ಪ್ರತಿದಿನ ರಾತ್ರಿ 7ಕ್ಕೆ ಯಕ್ಷಗಾನ ಪ್ರದರ್ಶನ ಆರಂಭವಾಗಲಿದ್ದು, 18ರಂದು ಸುಭದ್ರಾ ಕಲ್ಯಾಣ, 19ರಂದು ಬಿಲ್ಲ ಹಬ್ಬ, 20ರಂದು ಶರಸೇತು, 21ರಂದು ಶ್ರೀಕೃಷ್ಣ ವಿವಾಹ, 22ರಂದು ವರಾನ್ವೇಷಣೆ ಯಕ್ಷಗಾನ ಪ್ರಸಂಗ ಪ್ರದರ್ಶನವಾಗಲಿದೆ.

ಪರ್ಯಾಯ ಕೃಷ್ಣಾಪುರ ಮಠದ ದಿವಾನರಾದ ವರದರಾಜ್ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉದ್ಯಮಿಗಳಾದ ಗುರ್ಮೆ ಸುರೇಶ್ ಶೆಟ್ಟಿ, ಮನೋಹರ ಶೆಟ್ಟಿ ರವೀಂದ್ರ ಶೆಟ್ಟಿ, ಅರವಿಂದ ನಾಯಕ್ ಅಮ್ಮುಂಜೆ, ಗೋಪಾಲ ಬಂಗೇರ, ರಂಜನ್ ಕಲ್ಕುರ, ಜಯಕರ ಶೆಟ್ಟಿ ಇಂದ್ರಾಳಿ, ಮಾರಾಳಿ ಪ್ರತಾಪ್ ಶೆಟ್ಟಿ, ಮಂಗಳೂರು ದಿನೇಶ್ ಪೈ, ಎಸ್‌.ಎಸ್‌.ನಾಯಕ್‌ ಭಾಗವಹಿಸಲಿದ್ದಾರೆ ಎಂದರು.

ADVERTISEMENT

ಯಕ್ಷಪಂಚಮಿ ಸಮಾರೋಪ ಸಮಾರಂಭದಲ್ಲಿ ಬಡಗುತಿಟ್ಟಿನ ಅಗ್ರಗಣ್ಯ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಅವರಿಗೆ ತಲ್ಲೂರ್ಸ್‌ ಫ್ಯಾಮಿಲಿ ಟ್ರಸ್ಟ್‌ ಯಕ್ಞ ಪುರಸ್ಕಾರ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ₹ 10,000 ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ ಎಂದು ರಂಜಿತ್ ಶೆಟ್ಟಿ ತಿಳಿಸಿದರು.

ಯಕ್ಷ ಪಂಚಮಿಯ ಹಿಮ್ಮೇಳದಲ್ಲಿ ಸುಧೀರ್ ಭಟ್‌ ಪೆರ್ಡೂರು, ಎನ್‌.ಜಿ.ಹೆಗಡೆ, ಮಂಜುನಾಥ ನಾವುಡ, ಮುಮ್ಮೇಳದ ಸ್ತ್ರೀವೇಷದಲ್ಲಿ ಉಳ್ಳೂರು ಶಂಕರ ದೇವಾಡಿಗ, ಗಣೇಶ ದೇವಾಡಿಗ, ಹಾಸ್ಯದಲ್ಲಿ ಹಳ್ಳಾಡಿ ಜಯರಾಮ ಶೆಟ್ಟಿ, ಹಳ್ಳಾಡಿ ರತೀಶ್ ಶೆಟ್ಟಿ, ಮುಖ್ಯಪಾತ್ರದಲ್ಲಿ ಶ್ರೀಧರ ಕಾಂಚನ್, ಶಿಥಿಲ ಶೆಟ್ಟಿ, ರಾಜೇಶ್ ಬೈಕಾಡಿ, ಯುವರಾಜ ನಾಯ್ಕ, ಧನರಾಜ ಉಡುಪಿ ಪ್ರದರ್ಶನ ನೀಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.