ADVERTISEMENT

ಉಡುಪಿ: ಯುವ ಕಾಂಗ್ರೆಸ್‌ನಿಂದ ಸ್ಟಿಕ್ಕರ್ ಅಭಿಯಾನ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 3:08 IST
Last Updated 20 ಆಗಸ್ಟ್ 2025, 3:08 IST
ಯುವ ಕಾಂಗ್ರೆಸ್‌ನಿಂದ ಸ್ಟಿಕ್ಕರ್ ಅಭಿಯಾನ ನಡೆಯಿತು
ಯುವ ಕಾಂಗ್ರೆಸ್‌ನಿಂದ ಸ್ಟಿಕ್ಕರ್ ಅಭಿಯಾನ ನಡೆಯಿತು   

ಉಡುಪಿ: ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ನೇತೃತ್ವದಲ್ಲಿ ‘ಸ್ಟಾಪ್ ವೋಟ್ ಚೋರಿ’ ಸ್ಟಿಕ್ಕರ್ ಅಭಿಯಾನವನ್ನು ಇಲ್ಲಿನ ಬಸ್ ನಿಲ್ದಾಣ, ತಾಲ್ಲೂಕು ಕಚೇರಿ, ನಗರಸಭೆ ಮೊದಲಾದೆಡೆ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಅಭಿಯಾನದ ಅಂಗವಾಗಿ ಸಾರ್ವಜನಿಕ ಸ್ಥಳ, ವಾಹನಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಮುಖಂಡರಾದ ಮಹಾಬಲ ಕುಂದರ್, ಮುರಳಿ ಶೆಟ್ಟಿ, ಕೀರ್ತಿ ಶೆಟ್ಟಿ, ನಾಗೇಶ್ ಉದ್ಯಾವರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೇರ, ರಾಜ್ಯ ಯುವ ಕಾಂಗ್ರೆಸ್‌ನ ಸುರಯ್ಯ, ಮಮತಾ ನಾಯಕ್, ಪ್ರದೀಪ್ ಶೆಟ್ಟಿ, ರೋಷನ್ ಶೆಟ್ಟಿ, ನವೀನ್ ಸಾಲಿಯಾನ್ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.