ADVERTISEMENT

ಪಿಡಿಒ ಅಮಾನತು: ಗೋಕರ್ಣ ಪಂಚಾಯಿತಿ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 10:10 IST
Last Updated 14 ಫೆಬ್ರುವರಿ 2012, 10:10 IST

ಕುಮಟಾ: ಗೋಕರ್ಣ ಪಿ.ಡಿ.ಒ. ಕೃಷ್ಣಾ ನಂದ ನಾಯಕ ಅವರ ಅಮಾನತು ವಿರೋಧಿ ಶುಕ್ರವಾರ ಗೋಕರ್ಣ ಪಂಚಾ ಯಿತಿ ಆವಾರದಲ್ಲಿ ಸದಸ್ಯರು ಪ್ರತಿಭಟನೆ ವ್ಯಕ್ತಪಡಿಸಿದರು.

ಪಂಚಾಯಿತಿ  ಕಚೇರಿಯಲ್ಲಿ ಶಿವ ರಾತ್ರಿ ಹಬ್ಬದ ಪೂರ್ವ ತಯಾರಿ ಸಭೆ ನಡೆದ ನಂತರ ಸದಸ್ಯರು `ಕೃಷ್ಣಾನಂದ ಅವರು ಪ್ರಾಮಾಣಿಕ ಅಧಿಕಾರಿ, ಅವರ ಅಮಾನತಿಗೆ ಕಾರಣರಾದವರ ಹೆಸರು ತಿಳಿಸಿ~ ಎಂದು ಗಲಾಟೆ ನಡೆಸಿದರು.

ಸಭೆಯಲ್ಲಿದ್ದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಮೇಟಿ,       `ಕೃಷ್ಣಾನಂದ ಅವರ ಅಮಾನತಿಗೂ ನನಗೂ ಸಂಬಂಧವಿಲ್ಲ. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರು ಹೊರಡಿಸಿದ ಅಮಾನತು ಆದೇಶವನ್ನು ನಾನು ಜಾರಿಗೊಳಿಸಿದ್ದೇನೆ ಅಷ್ಟೇ. ಇದರ ಬಗ್ಗೆ ನೀವೆಲ್ಲ ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಅವರನ್ನು ಪ್ರಶ್ನಿಸಬೇಕಾಗಿದೆ~ ಎಂದರು.

ಜಿ.ಪಂ. ಸದಸ್ಯ ಪ್ರದೂಪ ನಾಯ್ಕ, `ಅಮಾನತು ವಾಪಸು ಪಡೆಯುವ ಬಗ್ಗೆ ಎಲ್ಲರೂ ಸೇರಿ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವ ರನ್ನು ಭೆಟಿ ಮಾಡೋಣ~ ಎಂದು ಸಲಹೆ ನೀಡಿದರು. 

ಸಭೆಯಲ್ಲಿ ಪಂಚಾ ಯಿತಿ ಸದಸ್ಯರಾದ ಮೋಹನ ನಾಯಕ, ಗಜಾನನ ಶೆಟ್ಟಿ, ಕ್ಷಮಾ ನಾಡಕರ್ಣಿ, ಶಾಂತಿ ಆಗೇರ, ಪಾರ್ವತಿ ನಾಯ್ಕ, ಮುಕ್ತಾ ಬಾಗಿಲ್, ರತ್ನಾ ಗೌಡ, ಶಾರದಾ ಮೂಡಂಗಿ, ಪಾರ್ವತಿ ರಾಯ್ಕರ್, ತಾ.ಪಂ. ಸದಸ್ಯೆ ಭಾರತಿ ದೇವತೆ, ಕಾಂಗ್ರೆಸ್ ಮುಖಂಡ ರಾದ ರಾಜಗೋಪಲ ಅಡಿ, ತೇಜಸ್ವಿ ನಾಯ್ಕ ಮೊದಲಾದವರಿದ್ದರು. ಸಭೆ ಯಲ್ಲಿ ಸಿ.ಪಿ.ಐ. ಶ್ರೀಕಾಂತ ಹಾಗೋ ಗೋಕರ್ಣ ಪಿ.ಎಸ್.ಐ. ಬಾಲಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.