ADVERTISEMENT

`ಬಿ' ಫಾರಂ ಗೊಂದಲ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 9:56 IST
Last Updated 19 ಏಪ್ರಿಲ್ 2013, 9:56 IST

ಯಲ್ಲಾಪುರ:  ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದು ಗೊಂದಲಕ್ಕೆ ಕಾರಣವಾಯಿತು.

ವೆಂಕಟ್ರಮಣ ಭಾಗ್ವತ್ ಹಾಗೂ ವಿಶ್ವನಾಥ ಭಾಗ್ವತ್ ಎರಡು ನಾಮಪತ್ರ ಸಲ್ಲಿಸಿ ಬಿ. ಫಾರಂ ನೀಡಿದ್ದರು. ಮೊದಲು ವೆಂಕಟ್ರಮಣ ಭಾಗ್ವತ್ ಅವರಿಗೆ ಬಿ ಫಾರಂ ನೀಡಿದ್ದು, ನಂತರ ವಿಶ್ವನಾಥ ಭಾಗ್ವತ್ ಅವರಿಗೆ ಪಕ್ಷ ಬಿ ಫಾರಂ ನೀಡಿತ್ತೆನ್ನಲಾಗಿದೆ.

ಸಂಜೆ ಆರು ಗಂಟೆಯವರೆಗೂ ಚುನಾವಣಾಧಿಕಾರಿ ಹಾಗೂ ಚುನಾವಣಾ ವೀಕ್ಷಕ ಡಾ.ಸುಂದರಂ ಪರಿಶೀಲನೆ ನಡೆಸಿ ವಿಶ್ವನಾಥ ಭಾಗ್ವತ್ ಅವರನ್ನು ಬಿಎಸ್ಸಾರ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದರು. ವೆಂಕಟ್ರಮಣ ಭಾಗ್ವತ್ ಅವರ ನಾಮಪತ್ರ ಪಕ್ಷೇತರರಾಗಿ ಸ್ವೀಕೃತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.