ADVERTISEMENT

ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 10:00 IST
Last Updated 16 ಮಾರ್ಚ್ 2012, 10:00 IST

ಅಂಕೋಲಾ: ನಗರದ ಅಂಚಿನಲ್ಲಿರುವ  ಶೆಡಗೇರಿ ಗ್ರಾಮದ ಸರಹದ್ದಿನ ಜನ ವಸತಿ ಇರುವ ಮನೆಗಳು, ಬಾಗಾ ಯತ್‌ಗಳು ಸೇರಿದಂತೆ   ಅಂದಾಜು 50 ಎಕರೆ ಭೂ ಪ್ರದೇಶವನ್ನು ಉದ್ದೇಶಿತ ವಸತಿ ಬಡಾ ವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿ ಕೊಳ್ಳಲು, ಕರ್ನಾಟಕ ರಾಜ್ಯ ಗೃಹ ಮಂಡಳಿ ಇತ್ತೀಚೆಗೆ ಹೊರಡಿಸಿರುವ ಅಧಿ ಸೂಚನೆಯನ್ನು ವಿರೋಧಿಸಿ ನೂರಾರು ಜನರು ಬುಧವಾರ ತಹ ಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.   

 ಜನರನ್ನು ಉದ್ದೇಶಿಸಿ ಮಾತನಾಡಿದ ಪ.ಪಂ. ಸದಸ್ಯ ರಾಜೇಂದ್ರ ವಿ. ನಾಯ್ಕ, ಮನೆ ಮಾರು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ರೈತಾಪಿ ಸಮುದಾಯ ಗಳನ್ನು, ದುಡಿಯುವ ವರ್ಗದವರನ್ನು ಬೀದಿಪಾಲು ಮಾಡಿ ಹಣವಂತರಿಗೆ ನಿವೇಶನ ಒದಗಿಸುವ ಗೃಹ ಮಂಡಳಿಯ ಅಧಿಸೂಚನೆ ಇಲ್ಲಿನ ಜನರಿಗೆ ಮಾರಕವಾ ಗಿದೆ. 

ಮಾಲೀಕರಿಗೆ ಪೂರ್ವಸೂಚನೆ ನೀಡದೇ ಮತ್ತು ಅವರ ಅನುಮತಿ ಪಡೆ ಯದೇ ಇಂತಹ ಆದೇಶ ಹೊರಡಿಸಿದ್ದನ್ನು ನೋಡಿದರೆ ಸರ್ಕಾರ ಜನಸಾಮಾನ್ಯರ ವಿರುದ್ಧ ಪಿತೂರಿ ನಡೆಸುತ್ತಿರುವಂತೆ ಕಂಡು ಬರುತ್ತಿದೆ ಎಂದು ಆರೋಪಿಸಿ ದರು.   

 ಮಾಜಿ ಜಿ.ಪಂ. ಅಧ್ಯಕ್ಷ ರಮಾನಂದ ನಾಯಕ, ಜಿ.ಪಂ. ಉಪಾಧ್ಯಕ್ಷ ಉದಯ ಡಿ. ನಾಯ್ಕ, ಸದಸ್ಯರಾದ ವಿನೋದ ನಾಯಕ ಬಾಸ್ಗೋಡ, ಸರಸ್ವತಿ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ತಾ.ಪಂ. ಸದಸ್ಯ ವಿನೋದ ಗಾಂವಕರ, ಪ.ಪಂ. ಉಪಾಧ್ಯಕ್ಷೆ ಜುವೇಲಾ ಫರ್ನಾಂಡೀಸ್,  ಸದಸ್ಯರಾದ ನೌಷಾದ್ ಶೇಖ್, ಉದ್ಯಮಿ ಸತೀಶ ಸೈಲ್, ಲಕ್ಷ್ಮಣ ಸಿ. ನಾಯ್ಕ,   ಪ್ರಮುಖ ರಾದ  ಲೀಲಾವತಿ ನಾಯ್ಕ, ಶಂಭು ಶೆಟ್ಟಿ, ಬಾಬಾ ಶೇಖ್, ರಾಜೇಶ ಮಿತ್ರಾ ನಾಯ್ಕ, ಪುರುಷೋತ್ತಮ ನಾಯ್ಕ, ಮಂಜು ಟೇಲರ್, ಮಂಜೇಶ್ವರ ನಾಯಕ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.  

 ಈ ಕುರಿತು ಗ್ರಾಮಸ್ಥರ ತಕರಾರು ಅರ್ಜಿಯನ್ನು ಮುಖ್ಯಮಂತ್ರಿಗಳಿಗೆ ತಹ ಸೀಲ್ದಾರ ಡಿ.ಎಚ್. ನಾಯ್ಕ ಮೂಲಕ ಸಲ್ಲಿಸಲಾಯಿತು, ನಂತರ ಪ.ಪಂ. ಅಧ್ಯಕ್ಷ ಭಾಸ್ಕರ ನಾರ್ವೇಕರ ಅವರಿಗೆ  ಉದ್ದೇಶಿತ ಭೂ ಸ್ವಾಧೀನ ಪ್ರಕ್ರಿಯೆಗೆ ಸಹಕರಿಸದಂತೆ  ಪ್ರತಿಭಟನಾಕಾರರು   ಆಗ್ರಹ ಪೂರ್ವಕ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.