ADVERTISEMENT

`ಮೂಲ ವಿಜ್ಞಾನವಿಲ್ಲದೆ ತಂತ್ರಜ್ಞಾನ ಇಲ್ಲ'

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 10:01 IST
Last Updated 27 ಡಿಸೆಂಬರ್ 2012, 10:01 IST

ಯಲ್ಲಾಪುರ: `ದೇಶದ ಎಲ್ಲ ಸಮಸ್ಯೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಪರಿಹಾರ ದೊರೆಯುತ್ತದೆ. ದೇಶದ ಪ್ರಗತಿ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಮಾತ್ರ ಸಾಧ್ಯ' ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಸದಸ್ಯ ಪ್ರೊ.ಎಸ್.ವಿ.ಸಂಕನೂರು ಹೇಳಿದರು.

ಇಲ್ಲಿಯ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. `ಮೂಲ ವಿಜ್ಞಾನ ತಂತ್ರಜ್ಞಾನದ ತಾಯಿಬೇರಾ ಗಿದೆ. ಮೂಲ ವಿಜ್ಞಾನವಿಲ್ಲದೇ  ತಂತ್ರಜ್ಞಾನ ಬೆಳೆಯಲು ಸಾಧ್ಯವಿಲ್ಲ. ಮೂಲ ವಿಜ್ಞಾನ ಬೆಳೆಯದೇ ಇರುವುದರಿಂದ ವಿಜ್ಞಾನ ಶಿಕ್ಷಕರ ಕೊರತೆ ರಾಜ್ಯದ ಎಲ್ಲೆಡೆ ಕಂಡು ಬರುತ್ತಿದೆ. ಹಾಗಾಗಿ ಮೂಲ ವಿಜ್ಞಾನ ಬೆಳೆಸಲು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ' ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜಿ.ನಾಯಕ, `ವಿದ್ಯಾರ್ಥಿಗಳು ಸಂವಾದದಿಂದ ಕುತೂಹಲ, ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೂಲಕ ವೈಜ್ಞಾನಿಕ ಮನೋಭಾವ ಹೆಚ್ಚಿಸಿಕೊಳ್ಳಬೇಕು' ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ನಾಯಕ, ಶಮಾ ಗ್ಯಾಸ್ ಏಜೆನ್ಸಿಯ ಮಾಲಕ ಎ.ಎ.ಶೇಖ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಆರ್.ಭಟ್ಟ ಮಾತನಾಡಿದರು. ವಿಜ್ಞಾನಿ ಡಾ.ರಘು, ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷೆ ಗೀತಾ ಪೆಡ್ನೆಕರ್, ಶಿಕ್ಷಣ ಸಂಯೋಜಕ ದಶರಥ ದೊಡ್ಮನಿ, ಜಿಲ್ಲಾ ವಿಜ್ಞಾನ ಸಮಿತಿ ಅಧ್ಯಕ್ಷ ಮಾದೇವಿ ಮಾರ್ಕಾಂಡೆ ಉಪಸ್ಥಿತರಿದ್ದರು.

ಸಿಂಧು ವೈದ್ಯ ಪ್ರಾರ್ಥನೆ ಹಾಡಿದರು. ಕ.ರಾ.ವಿ.ಪ ಜಿಲ್ಲಾ ಸಂಚಾಲಕ ಎಂ.ರಾಜಶೇಖರ್ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ್ ಸಿ.ಎಸ್ ನಿರೂಪಿಸಿದರು. ಸದಾನಂದ ದಬಗಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.