ADVERTISEMENT

ಯಲ್ಲಾಪುರ ಬಳಿ 10 ಅಡಿ ಉದ್ದದ ಕಾಳಿಂಗ ಸರ್ಪ! ಉರಗ ರಕ್ಷಕ ಮಂಜುರಿಂದ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 3:11 IST
Last Updated 16 ಡಿಸೆಂಬರ್ 2025, 3:11 IST
ಯಲ್ಲಾಪುರ ತಾಲ್ಲೂಕು ಬಾಳೆಗದ್ದೆಯಲ್ಲಿ ಮನೆಯ ಸಮೀಪ ಬಂದ ಕಾಳಿಂಗ ಸಪ೯
ಯಲ್ಲಾಪುರ ತಾಲ್ಲೂಕು ಬಾಳೆಗದ್ದೆಯಲ್ಲಿ ಮನೆಯ ಸಮೀಪ ಬಂದ ಕಾಳಿಂಗ ಸಪ೯   

ಯಲ್ಲಾಪುರ: ತಾಲ್ಲೂಕಿನ ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಗದ್ದೆಯಲ್ಲಿ ಮನೆಯ ಸಮೀಪ ಬಂದಿದ್ದ ಸುಮಾರು ಹತ್ತು ಅಡಿ ಉದ್ದದ ಕಾಳಿಂಗ ಸರ್ಪವೊಂದನ್ನು ಭರತನಹಳ್ಳಿಯ ಉರಗ ರಕ್ಷಕ ಮಂಜು ಸೋಮವಾರ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಬಾಳೆಗದ್ದೆಯ ದಾಮು ನಾಯ್ಕ ಎನ್ನುವವರ ಮನೆ ಬಳಿಯ ಮರವೊಂದರಲ್ಲಿ ಕಾಳಿಂಗ ಸಪ೯ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಯ ಶಂಕರ್ ಅಜ್ಜಪ್ಪನವರ ಸಲಹೆಯಂತೆ ಭರತನಹಳ್ಳಿಯ ಉರಗ ರಕ್ಷಕ ಮಂಜು ಹಾವನ್ನು ಹಿಡಿದು ಕಾಡಿಗೆ ಬಿಟ್ಟರು.

ಕಾರ್ಯಾಚರಣೆಯಲ್ಲಿ ದಾಮು ನಾಯ್ಕ, ಚಿದಂಬರ ನಾಯ್ಕ, ದತ್ತು ಪಟಗಾರ, ದಿನೇಶ ಪಟಗಾರ, ವಿನಾಯಕ ಪಟಗಾರ, ಪ್ರಕಾಶ ಪಟಗಾರ, ಸುರೇಶ ಪಟಗಾರ, ಚಂದ್ರಶೇಖರ ಪಟಗಾರ, ಮಹೇಶ ಪಟಗಾರ, ಸಂತೋಷ ಪಟಗಾರ, ಮಂಜುನಾಥ ಭಟ್ಟ ಕನೇನಳ್ಳಿ, ಶೇಖರ ಪಟಗಾರ, ಗ್ರಾಮ ಪಂಚಾಯಿತಿ ಸದಸ್ಯ ಗ. ರಾ. ಭಟ್ಟ ಪಾಲ್ಗೊಂಡಿದ್ದರು.

ADVERTISEMENT