ADVERTISEMENT

ನಿಯಮ ಉಲ್ಲಂಘನೆ: 9 ಮಂದಿ ಬಂಧನ

ಕೋವಿಡ್ 19: ಜಿಲ್ಲೆಯಲ್ಲಿ ಗಂಭೀರ ಸ್ವರೂಪದ 10 ಪ್ರಕರಣಗಳು ದಾಖಲು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 11:49 IST
Last Updated 2 ಏಪ್ರಿಲ್ 2020, 11:49 IST
ಶಿವಪ್ರಕಾಶ ದೇವರಾಜು
ಶಿವಪ್ರಕಾಶ ದೇವರಾಜು   

ಕಾರವಾರ:ಲಾಕ್‌ಡೌನ್ ನಿಯಮದ ಉಲ್ಲಂಘನೆಸಂಬಂಧ ಜಿಲ್ಲೆಯಲ್ಲಿ 10ಗಂಭೀರ ಸ್ವರೂಪದಪ್ರಕರಣಗಳುದಾಖಲಾಗಿವೆ. ಒಂಬತ್ತು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ 19 ಕುರಿತು ಸುಳ್ಳು ಸುದ್ದಿಯನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದ ದಾಂಡೇಲಿಯ ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ವಿನಾಯಕ ಚೌಹಾಣ್ ಮತ್ತು ವೆಂಕಟೇಶ ಪ್ರಸಾದ್ ಆರೋಪಿಗಳು.ನಿಷೇಧಾಜ್ಞೆಯ ನಡುವೆಯೂ ಹಳಿಯಾಳದ ಎರಡು ಮಸೀದಿಗಳಲ್ಲಿ ಸೇರಿ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದ 22 ಮಂದಿಯ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮಾರ್ಚ್ 10ರ ನಂತರ ಮೈಸೂರು ಸೇರಿದಂತೆ ವಿವಿಧೆಡೆ ಆಗಿರುವ ಜಮಾತ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದವರ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಅಂಥವರು ಯಾರಾದರೂ ಇದ್ದರೆ ಕಡ್ಡಾಯವಾಗಿ ಮಾಹಿತಿ ಮುಂದೆ ಬಂದುಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಕೋವಿಡ್ 19 ಪೀಡಿತರಾಗುವುದು ನಮ್ಮ ತಪ್ಪಲ್ಲ. ಆದರೆ, ನಮಗಿರುವ ಅನಾರೋಗ್ಯವನ್ನು ಮುಚ್ಚಿಡುವುದು ಮತ್ತುಸೋಂಕನ್ನು ಹರಡುವುದು ತಪ್ಪು’ ಎಂದು ಅವರುವಿಶ್ಲೇಷಿಸಿದರು.

ADVERTISEMENT

‘ಕೊರೊನಾ ವೈರಸ್ ಹರಡುವುದನ್ನು ತಡೆಯಲು ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಈ ಸಂಬಂಧ ಮುಸ್ಲಿಂ ಧರ್ಮಗುರುಗಳ ಜೊತೆ ಚರ್ಚಿಸಲಾಗಿದೆ. ರಾಷ್ಟ್ರಮಟ್ಟದ ಮುಖಂಡರೂ, ಸಮುದಾಯದ ಪ್ರಮುಖರೂ ಗುಂಪಾಗಿ ಸೇರದಂತೆಮನವಿ ಮಾಡಿದ್ದಾರೆ. ಆದರೂ ನಿಯಮದ ಉಲ್ಲಂಘನೆ ಮಾಡಿದ್ದಾರೆ. ಮನೆಗಳಲ್ಲೇ ಪ್ರಾರ್ಥನೆ ಮಾಡಬೇಕು. ಇದು ಅವರ, ಕುಟುಂಬದ ಮತ್ತು ಸಮಾಜದ ಒಳಿತಿಗಾಗಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಲಾಕ್‌ಡೌನ್ ನಿಯಮದ ಉಲ್ಲಂಘನೆ ಮಾಡಿದವರ ಕಾರು, ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಸರ್ಕಾರದ ಆದೇಶ ಪಾಲನೆಗೆ ಜಿಲ್ಲಾ ಪೊಲೀಸರು ನಿರಂತರ ಗಸ್ತು ತಿರುಗುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಗಸ್ತು ವಾಹನ ಬಾರದಿದ್ದರೂ ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ 200ಕ್ಕೂ ಅಧಿಕ ಜನರನ್ನು ಗುರುತಿಸಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಇನ್ನು ಮುಂದೆ ಮತ್ತಷ್ಟು ಗಂಭೀರವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಎಂಟು ಮಂದಿ ಭಾಗಿ:ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಗಿ ಜಮಾತ್‌ನಲ್ಲಿಜಿಲ್ಲೆಯಎಂಟು ಮಂದಿ ಭಾಗವಹಿಸಿದ್ದರು. ಎಲ್ಲರನ್ನೂ ಗುರುತಿಸಲಾಗಿದ್ದು, ದಾಂಡೇಲಿ, ಕುಮಟಾ ಮತ್ತು ಹೊನ್ನಾವರ ಸುತ್ತಮುತ್ತಲಿನವರಾಗಿದ್ದಾರೆ. ಅವರು 14 ದಿನಗಳ ಕ್ವಾರಂಟೈನ್ ಅವಧಿಯನ್ನು ಈಗಾಗಲೇ ಮುಕ್ತಾಯಗೊಳಿಸಿದ್ದಾರೆ. ಆದರೂ ಅವರ ಗಂಟಲುದ್ರವದ ಮಾದರಿಯನ್ನು ಪರಿಶೀಲನೆಗೆ ಜಿಲ್ಲಾಡಳಿತ ಕಳುಹಿಸಿಕೊಟ್ಟಿದೆ’ ಎಂದು ಹೇಳಿದರು.

‘ಕೇಂದ್ರದಿಂದ ಬಂದಿದ್ದ ಪಟ್ಟಿಯಲ್ಲಿ ಒಟ್ಟು 21 ಮಂದಿಯನ್ನು ಗುರುತಿಸಲಾಗಿತ್ತು. ಆದರೆ, 13 ಜನರ ಮೂಲ ಉತ್ತರ ಕನ್ನಡವಾಗಿದ್ದು,ದೆಹಲಿ ಸೇರಿದಂತೆ ಬೇರೆಬೇರೆ ನಗರಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಲ್ಲಿಯ ವಿಳಾಸ ನೀಡಿ ಸಿಮ್‌ ಕಾರ್ಡ್ ಖರೀದಿಸಿದ್ದರು’ ಎಂದು ಸ್ಪಷ್ಟಪಡಿಸಿದರು.

––––

ಲಾಕ್‌ಡೌನ್: ಪೊಲೀಸ್ ಕ್ರಮ

––––

10

ಗಂಭೀರ ಸ್ವರೂಪದ ಪ್ರಕರಣ

75

ವಾಹನಗಳ ಜಪ್ತಿ

20

ಆರೋಪಿಗಳಬಂಧನ

200ಕ್ಕೂ ಅಧಿಕ ಜನ

ಡ್ರೋಣ್‌ ಮೂಲಕ ಪತ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.