ADVERTISEMENT

ಕೆಲಸಕ್ಕೆ ಗೈರು: ದ್ವಿತೀಯ ದರ್ಜೆ ಸಹಾಯಕನಿಗೆ ನೊಟೀಸ್

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 14:55 IST
Last Updated 16 ಆಗಸ್ಟ್ 2021, 14:55 IST

ಶಿರಸಿ: ಹತ್ತು ತಿಂಗಳಿನಿಂದ ಕೆಲಸಕ್ಕೆ ಗೈರಾಗಿರುವ ಜೋಯಿಡಾದ ಶ್ರೀರಾಮ ಪ್ರೌಢಶಾಲೆಯ ದ್ವಿತೀಯ ದರ್ಜೆ ಸಹಾಯಕ ಶ್ರೀಶೈಲ ಬಸಪ್ಪ ಮಡಿವಾಳರ ಅವರಿಗೆ ಕಾರಣ ಕೇಳಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಅಂತಿಮ ನೊಟೀಸ್ ನೀಡಿದ್ದಾರೆ.

‘ಶ್ರೀಶೈಲ 2020ರ ಆ.18 ರಂದು ಶ್ರೀರಾಮ ಪ್ರೌಢಶಾಲೆಗೆ ನೇಮಕಾತಿ ಆಗಿದ್ದರು. ಸೆ.2ರ ವರೆಗೆ ಮಾತ್ರ ಕೆಲಸ ಮಾಡಿದ್ದ ಅವರು ಬಳಿಕ ಅಕ್ಟೋಬರ್ 2ರ ವರೆಗೆ ವೈದ್ಯಕೀಯ ರಜೆ ಪಡೆದಿದ್ದರು. ನಂತರ ಅನುಮತಿ ಪಡೆಯದೆ ರಜೆ ಮೇಲಿದ್ದಾರೆ. ಈವರೆಗೂ ಕೆಲಸಕ್ಕೆ ಹಾಜರಾಗಿಲ್ಲ. ಹೀಗಾಗಿ ನೊಟೀಸ್ ನೀಡಲಾಗಿದೆ’ ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದ್ದಾರೆ.

‘ನೊಟೀಸ್ ತಲುಪಿದ ಹದಿನೈದು ದಿನಗಳ ಒಳಗೆ ಡಿಡಿಪಿಐ ಕಚೇರಿ ಸಂಪರ್ಕಿಸಿ ರಜೆ ಪಡೆದಿದ್ದಕ್ಕೆ ಸೂಕ್ತ ಕಾರಣ ತಿಳಿಸಬೇಕು. ಇಲ್ಲದಿದ್ದರೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.