ಶಿರಸಿ: ಶಿರಸಿ–ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಬಾಳೆಹದ್ದ ಕ್ರಾಸ್ ಬಳಿ ಕಾರು ಮತ್ತು ಪಿಕಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.
ಮೈಸೂರಿನ ಎಬಿವಿಪಿ ಮುಖಂಡ, ಎಂಐಟಿಯಲ್ಲಿ ಉದ್ಯೋಗಿಯಾಗಿದ್ದ ರವಿಕುಮಾರ್, ಭೈರುಂಬೆ ಸೂರಿಮನೆಯ ಮಹಾಬಲೇಶ್ವರ ಹೆಗಡೆ, ಶಾರದಾ ಹೆಗಡೆ ಮೃತರು. ಮಾಧವ್ ಮತ್ತು ಶೇಖರ್ ಎಂಬುವವರು ಗಾಯಗೊಂಡಿದ್ದಾರೆ.
ರವಿಕುಮಾರ್ ಮತ್ತು ತಂಡದವರು ಕಿರವತ್ತಿ ನಿರಾಶ್ರಿತ ಕೇಂದ್ರಕ್ಕೆ ಪರಿಹಾರ ಸಾಮಗ್ರಿಗಳನ್ನು ಪೂರೈಸಿ, ವಾಪಸ್ ಬರುತ್ತಿರುವಾಗ ಈ ಘಟನೆ ಸಂಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.