ADVERTISEMENT

ತಾ.ಪಂ.ಗಳಿಗೆ ಆಡಳಿತಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 4 ಮೇ 2021, 17:39 IST
Last Updated 4 ಮೇ 2021, 17:39 IST

ಕಾರವಾರ: ಜಿಲ್ಲೆಯ ಎಲ್ಲ ತಾಲ್ಲೂಕು ಪಂಚಾಯಿತಿಗಳ ಅಧಿಕಾರಾವಧಿಯು ಈ ತಿಂಗಳ ಮೊದಲ ಮತ್ತು ಎರಡನೇ ವಾರದಲ್ಲಿ ಮುಕ್ತಾಯವಾಗುತ್ತಿದೆ. ಹಾಗಾಗಿ ಮುಂದಿನ ಸದಸ್ಯರ ಆಯ್ಕೆ ಪ್ರಕ್ರಿಯೆ ಮುಗಿಯುವ ತನಕ ಅಥವಾ ಮುಂದಿನ ಆದೇಶದವರೆಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ.

ಹಾಲಿ ಆಡಳಿತದ ಅಧಿಕಾರಾವಧಿ ಮುಗಿದ ದಿನಾಂಕದ ಮರುದಿನದಿಂದ ಆಡಳಿತಾಧಿಕಾರಿ ಕಾರ್ಯ ನಿರ್ವಹಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಥವಾ ಆ ದರ್ಜೆಗೆ ಕಡಿಮೆ ಇಲ್ಲದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.

ತಾ.ಪಂ ಆಡಳಿತಾಧಿಕಾರಿಗಳು

ADVERTISEMENT

ತಾಲ್ಲೂಕು; ಅವಧಿ ಮುಕ್ತಾಯ; ಆಡಳಿತಾಧಿಕಾರಿ

ಕಾರವಾರ; ಮೇ 11; ಜಿಲ್ಲಾ ಅಂಕಿ ಸಂಖ್ಯೆ ಸಂಗ್ರಹಣಾಧಿಕಾರಿ

ಅಂಕೋಲಾ; ಮೇ 10; ಜಿ.ಪಂ ಉಪ ಕಾರ್ಯದರ್ಶಿ (ಆಡಳಿತ)

ಕುಮಟಾ; ಮೇ 9; ಪ್ರಾಚಾರ್ಯರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕುಮಟಾ

ಹೊನ್ನಾವರ; ಮೇ 6; ಜಿ.ಪಂ ಮುಖ್ಯ ಯೋಜನಾಧಿಕಾರಿ

ಭಟ್ಕಳ; ಮೇ 5; ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ

ಶಿರಸಿ; ಮೇ 15; ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

ಸಿದ್ದಾಪುರ; ಮೇ 12; ಡಿ.ಡಿ‍.ಪಿ.ಐ ಶಿರಸಿ

ಯಲ್ಲಾಪುರ; ಮೇ 16; ಉಪ ಕೃಷಿ ನಿರ್ದೇಶಕ, ಶಿರಸಿ

ಮುಂಡಗೋಡ; ಮೇ 11; ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ

ಹಳಿಯಾಳ; ಮೇ 16; ಇ.ಇ., ಚಿಕ್ಕ ನೀರಾವರಿ ವಿಭಾಗ, ಹಳಿಯಾಳ

ದಾಂಡೇಲಿ; ಮೇ 16; ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ

ಜೊಯಿಡಾ; ಮೇ 15; ಕೃಷಿ ಇಲಾಖೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.