ADVERTISEMENT

ಅಂಕೋಲಾ | ಏಡ್ಸ್: ಜಾಗೃತಿ ಮೂಡಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 2:34 IST
Last Updated 2 ಡಿಸೆಂಬರ್ 2025, 2:34 IST
ಅಂಕೋಲಾ ಪಟ್ಟಣದಲ್ಲಿ ಎನ್.ಸಿ.ಸಿ ಘಟಕದ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಾಗೃತಿ ಅಭಿಯಾನ ನಡೆಸಲಾಯಿತು 
ಅಂಕೋಲಾ ಪಟ್ಟಣದಲ್ಲಿ ಎನ್.ಸಿ.ಸಿ ಘಟಕದ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಾಗೃತಿ ಅಭಿಯಾನ ನಡೆಸಲಾಯಿತು    

ಅಂಕೋಲಾ: ಏಡ್ಸ್ ಒಂದು ಮಹಾಮಾರಿ ರೋಗವಾಗಿದ್ದು, ಅದನ್ನು ತಡೆಗಟ್ಟುವುದೇ ನಮ್ಮೆಲ್ಲರ ಉದ್ದೇಶವಾಗಿದೆ.  ವಿದ್ಯಾರ್ಥಿಗಳು ಏಡ್ಸ್ ರೋಗದ ಕುರಿತು ಜನಜಾಗೃತಿ ಮೂಡಿಸಬೇಕು’ ಎಂದು ಮುಖ್ಯಶಿಕ್ಷಕ ಚಂದ್ರಶೇಖರ ಕಡೇಮನಿ ಹೇಳಿದರು.

ಪಟ್ಟಣದ ಕೆನರಾ ವೆಲ್ಫೇರ್ ಟ್ರಸ್ಟ್‌ನ ಪಿ.ಎಂ.ಹೈಸ್ಕೂಲ್‌ನ ಎನ್.ಸಿ.ಸಿ ಘಟಕದ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಸೋಮವಾರ ನಡೆದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಎನ್.ಸಿ.ಸಿ ಕಮಾಂಡರ್ ಜಿ.ಆರ್.ತಾಂಡೇಲ ಪ್ರಾಸ್ತಾವಿಕ ಮಾತನಾಡಿ, ಏಡ್ಸ್ ರೋಗದ ಕುರಿತು ಅನೇಕ ವರ್ಷಗಳಿಂದ ಎನ್.ಸಿ.ಸಿ  ಘಟಕದ ವತಿಯಿಂದ ಅರಿವು ಮೂಡಿಸಲಾಗುತ್ತಿದೆ. ಎನ್.ಸಿ.ಸಿ ಕೆಡೆಟ್‌ಗಳು ಏಡ್ಸ್ ರೋಗದ ಬಗ್ಗೆ ಅಧ್ಯಯನ ನಡೆಸಿ, ಆ ರೋಗವನ್ನು ತಡೆಗಟ್ಟುವುದರ ಕುರಿತು ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.

ADVERTISEMENT

ಹಿರಿಯ ಶಿಕ್ಷಕಿ ನಯನಾ ನಾಯಕ, ಮಗುದುಮ್ ಅಲಗೋಡಿ, ಗಣೇಶ ಭಟ್ಟ, ರೇಷ್ಮಾ ಮನಕಾಮೆ, ರಾಜೇಶ ನಾಯಕ, ಸಾರ್ಜೆಂಟ್ ನಿತಿನ್ ನಾಯ್ಕ ಅಮಯ ಗಿರಫ್, ರಜತ ನಾಯ್ಕ, ಹಾಗೂ ಎನ್.ಸಿ.ಸಿ. ಕೆಡೆಟ್‌ಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.