ADVERTISEMENT

ಕ್ರೀಡಾ ರಸಪ್ರಶ್ನೆ ಸ್ಪರ್ಧೆ: ಅಜೇಯ ಪ್ರಥಮ

ಜಿಲ್ಲಾ ಕ್ರೀಡಾ ಪ್ರತಿಷ್ಠಾನದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 10:25 IST
Last Updated 31 ಆಗಸ್ಟ್ 2018, 10:25 IST
ದಾಂಡೇಲಿಯ ಶಾಲೆಯೊಂದರಲ್ಲಿ ರಸಪ್ರಶ್ನೆ ಸ್ಪರ್ಧೆಯ ಪ್ರಶ್ನೆಗಳಿಗೆ ಉತ್ತರಿಸುವುದರಲ್ಲಿ ತಲ್ಲೀನರಾಗಿರುವ ವಿದ್ಯಾರ್ಥಿನಿಯರು
ದಾಂಡೇಲಿಯ ಶಾಲೆಯೊಂದರಲ್ಲಿ ರಸಪ್ರಶ್ನೆ ಸ್ಪರ್ಧೆಯ ಪ್ರಶ್ನೆಗಳಿಗೆ ಉತ್ತರಿಸುವುದರಲ್ಲಿ ತಲ್ಲೀನರಾಗಿರುವ ವಿದ್ಯಾರ್ಥಿನಿಯರು   

ಕಾರವಾರ: ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಉತ್ತರಕನ್ನಡ ಜಿಲ್ಲಾ ಕ್ರೀಡಾ ಪ್ರತಿಷ್ಠಾನವು ಈಚೆಗೆ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಜೇಯ ಪಾಂಡುರಂಗ ಮಹಾಲೆ ಪ್ರಥಮ ಸ್ಥಾನ ಗೆದ್ದುಕೊಂಡಿದ್ದಾನೆ. ಅವನುಅಂಕೋಲಾದ ಜೇಸಿ ಹೈಸ್ಕೂಲ್ ವಿದ್ಯಾರ್ಥಿ.

ವಿವಿಧತಾಲ್ಲೂಕುಗಳಆಯ್ದ ಶಾಲೆಗಳಲ್ಲಿ ಹಮ್ಮಿಕೊಳ್ಳಲಾದ ಸ್ಪರ್ಧೆಯಲ್ಲಿಒಟ್ಟು 1,100 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಶ್ನೆಪತ್ರಿಕೆಗಳುಹಾಗೂ ವಾಟ್ಸ್‌ಆ್ಯಪ್ಮೂಲಕ 25 ಪ್ರಶ್ನೆಗಳನ್ನು ಕೇಳಲಾಗಿತ್ತು. ಅಮೆರಿಕದಲ್ಲಿ ನೆಲೆಸಿರುವ ಹಳಿಯಾಳದ ಸಾಫ್ಟ್‌ವೇರ್ ಎಂಜಿನಿಯರ್ಮಹೇಶ ಮೋಹನ ಹೂಲಿ ಪ್ರಾಯೋಜಕತ್ವ ವಹಿಸಿದ್ದರು.

ವಿಜೇತರಿಗೆ ಕ್ರೀಡಾ ದಿನಾಚರಣೆಯಂದು ಆಯಾ ವಿದ್ಯಾಲಯಗಳಲ್ಲೇಪ್ರಮಾಣಪತ್ರ ಹಾಗೂ ಪದಕಗಳನ್ನು ವಿತರಿಸಲಾಯಿತು. ಕೈಗಾದ ತಾಂತ್ರಿಕ ಅಧಿಕಾರಿ ಶ್ರೀನಿವಾಸ ಪಂಚಮುಖಿಅವರು ಪ್ರಶ್ನೆಗಳನ್ನು ಸಿದ್ಧಪಡಿಸಿದ್ದರು ಎಂದು ಪ್ರತಿಷ್ಠಾನದ ಕಾರ್ಯದರ್ಶಿಮಹಾಂತೇಶ ಗಂಗಯ್ಯ ಓಶಿಮಠ ತಿಳಿಸಿದ್ದಾರೆ.

ADVERTISEMENT

ವಿಜೇತರು (ತಾಲ್ಲೂಕುವಾರು):ದಾಂಡೇಲಿ:ಅಭಯ್ ಎಸ್.ಗೋಡಕಿಂಡಿ, ಚಿನ್ಮಯ್ ಎಸ್.ಭಾಗ್ವತ, ಕುಡೇಲಪ್ಪಾ ಎಸ್.ಗೌಡರ, ಜಿ.ಎ.ಪೂಜಾ, ಸಾಯಿನಾಥ ಎನ್.ರಾಥಿ,ಎಸ್.ಎಮ್.ತರುಣ, ಜೀವಿತಾ ಫರ್ನಾಂಡಿಸ್, ಪ್ರೀತಿ ಶರಣಪ್ಪ ಮಡಿವಾಳರ, ತುಳಸಿ ಪಾಂಡುರಂಗ ದಳವಿ, ಸೋನಿ ಸಣ್ಣಯಲ್ಲಪ್ಪ ಬಂಗೇರ.

ಕುಮಟಾ:ವರುಣ ಎಸ್.ಹೆಗಡೆ, ಸಂಕಲ್ಪ ಎಸ್.ನಾಯಕ, ಅನಿರುದ್ಧ ಆರ್.ಭಟಕೆರೆ.

ಹೊನ್ನಾವರ:ತನ್ಯಶ್ರೀ ಕೃಷ್ಣ ಮೇಸ್ತ, ಮನೋಜ ಎಸ್.ಗೌಡ, ಸ್ವಾತಿ ಮಾರುತಿ ಮೇಸ್ತ, ಪ್ರೀತಿ ಪಿ.ಮೇಸ್ತ, ಭೂಮಿಕಾ ಜೆ.ನಾಯ್ಕ, ಸೀಮಾ ಅಮುಸೆ ಗೌಡ, ವಿನಾಯಕ ಜಿ.ಮರಾಠಿ.

ಮುಂಡಗೋಡ:ಗೀತಾ ಹುಲಿಕಟ್ಟಿ, ಸ್ವಾತಿ ಹೊಸಮನಿ, ಎ.ಪುನೀತಾ, ಎ.ಉಮ್ಮಿ, ಪ್ರಶಾಂತ ಎಸ್.ರಾಠೋಡ,ಅಸಿಭಾನು ಎನ್.ಕಂಬಾರ,ಬೀಬಿಅಮಿನಾ ಎಫ್.ಬೆಂಡಿಗೇರಿ, ದೀಪಾ ಪಿ.ರಾಯ್ಕರ್, ಅಬ್ದುಲ್ ಹಮೀದ್ ಎ.ಬಂಗಲೆವಾಲೆ.

ಕಾರವಾರ:ಪ್ರಶಾಂತ ಎನ್.ನಾಯ್ಕ್, ರೋಜರ್ ಎಮ್.ಫರ್ನಾಂಡಿಸ್, ಜೀವನ್ ಪಿ.ಗುನಗಿ, ಸುದೀಪ್ ಎಸ್.ಅರ್ಗೇಕರ, ಸಂಜನಾ ಬಿ.ಮಹೇಕರ, ರೋಶನ್ ಎನ್.ಗೌಡ, ದರ್ಶನ ಡಿ.ನಾಯ್ಕ್, ಪ್ರಜ್ವಲ್ ಎಮ್.ಗುನಗಿ,ನಮ್ರತಾ ಜಿ.ಕಾಜುಗಾರ, ಸೊನಾಲಿ ಜಿ.ವೇಳಿಪ್, ಶರದ್ ಡಿ.ತಾಮ್ಸೆ, ದರ್ಶನ ಎಮ್.ನಾಯ್ಕ್, ಸನ್ನಿಕೃಷ್ಣನ್ ಎಮ್.ಫರ್ನಾಂಡೀಸ್, ವಿಕಾಸ ಎಮ್.ನಾಯಕ್, ಬಾಷಾ ಹುಸೇನ್ ಸಾಬ್, ಗಿರೀಶ್ ಲಮಾಣಿ, ಬೀರಪ್ಪ ಭೋವಿ, ರಾಘವೇಂದ್ರ ದೇಸಾಯಿ, ತೇಜಾ ಪೆಡ್ನೇಕರ, ಸೌರವ ಭೋವಿ, ಪವನ್ ರೇವಣಕರ.

ಸಿದ್ದಾಪುರ:ಮನ್ವಿತ್.ಎಮ್, ಪ್ರತಿಭಾ.ಜಿ, ಪ್ರತೀಕ ಜಿ.ಮೊಗೇರ, ಕುಮಾರಸ್ವಾಮಿ ಎಸ್.ಗೌಡರ, ಕೆ.ಮಯೂರ ಶೆಣೈ, ಉದಯ ಜೆ.ಒಕ್ಕಲಿಗ, ಪದ್ಮಶ್ರೀ ಜಿ.ನಾಯ್ಕ, ಸಿಂಚನಾ ಪಿ.ನಾಯ್ಕ, ಸುಬ್ರಹ್ಮಣ್ಯ ಕೆ.ಹೆಗಡೆ, ಕಿಶೋರ ಎಸ್.ಹೆಗಡೆ, ದಾಮೋದರ ಪಿ.ಭಟ್ಟ, ದರ್ಶನ ಪಿ.ನಾಯ್ಕ, ರಕ್ಷಿತಾ ರಾಕೇಶ ವೆರ್ಣೇಕರ, ಶಿಲ್ಪಾಕನ್ನಾ ಗೌಡ, ವಿದ್ಯಾ ನರಸಿಂಹ ಗೌಡ, ಭಾವನಾ ಜಯರಾಮ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.