ADVERTISEMENT

ಅಂಕೋಲಾ: ತೋಟದಲ್ಲಿ ಕೊಯ್ದಿಟ್ಟ ಅಡಿಕೆಗೊನೆ ಕಳವು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 3:12 IST
Last Updated 30 ನವೆಂಬರ್ 2021, 3:12 IST

ಅಂಕೋಲಾ: ತೋಟದಲ್ಲಿ ಕೊಯ್ದಿಟ್ಟ ಅಡಿಕೆ ಗೊನೆಗಳನ್ನು ಕಳ್ಳರು ಕದ್ದೊಯ್ದ ಘಟನೆ ತಾಲ್ಲೂಕಿನ ಕೊಡ್ಲಗದ್ದೆಯಲ್ಲಿ ನಡೆದಿದೆ.

ಇಲ್ಲಿನ ರಾಮಕೃಷ್ಣ ವಿಶ್ವೇಶ್ವರ ಹೆಗಡೆ ಅವರ ಅಡಿಕೆ ತೋಟದಲ್ಲಿ ಗೊನೆಗಳನ್ನು ಕೊಯ್ದು ಒಣಗಿಸಲು ಇಟ್ಟಿದ್ದರು. ಸುಮಾರು ₹ 35000 ಮೌಲ್ಯದ 10 ಚೀಲ ಅಡಿಕೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಕುರಿತು ಭಾನುವಾರ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸೋಮವಾರ ಎಸ್ಐ ಪ್ರೇಮನ ಗೌಡ ಪಾಟೀಲ್ ನೇತೃತ್ವದಲ್ಲಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕಾರವಾರದಿಂದ ತನಿಖೆಗೆ ಪೂರಕವಾಗಿ ಶ್ವಾನದಳ ಕರೆ ತರಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.