ADVERTISEMENT

ಅಂಕೋಲಾ: ಶಾಲೆಯ ಧ್ವಜಸ್ತಂಭಕ್ಕೆ ‘ಗೃಹಲಕ್ಷ್ಮೀ’ ಹಣವನ್ನು ದೇಣಿಗೆ ನೀಡಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 20:03 IST
Last Updated 4 ಜನವರಿ 2026, 20:03 IST
<div class="paragraphs"><p>ಶ್ಯಾಮಲ ಗೌಡ , ಅಂಕೋಲಾದ ಅಂಬುಕೋಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿರ್ಮಾಣ ಮಾಡಿರುವ ಧ್ವಜಸ್ತಂಭ</p></div>

ಶ್ಯಾಮಲ ಗೌಡ , ಅಂಕೋಲಾದ ಅಂಬುಕೋಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿರ್ಮಾಣ ಮಾಡಿರುವ ಧ್ವಜಸ್ತಂಭ

   

ಅಂಕೋಲಾ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಅಂಬುಕೋಣದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಧ್ವಜಸ್ತಂಭ ನಿರ್ಮಾಣಕ್ಕೆ, ಗ್ರಾಮದ ಶ್ಯಾಮಲಾ ತಿಮ್ಮಪ್ಪ ಗೌಡ ತಮಗೆ ಗೃಹಲಕ್ಷ್ಮೀ ಯೋಜನೆಯಿಂದ ಬಂದಿದ್ದ ₹20 ಸಾವಿರವನ್ನು ದೇಣಿಗೆ ನೀಡಿದ್ದಾರೆ. 

‘ಪ್ರತಿ ವರ್ಷ ಶಾಲೆಯಲ್ಲಿ ಸ್ವಾತಂತ್ರ್ಯ, ಗಣರಾಜ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುತ್ತೇನೆ. ಧ್ವಜಸ್ತಂಭವನ್ನು ಹೊಸದಾಗಿ ನಿರ್ಮಿಸುವ ವಿಷಯ ಅಲ್ಲಿ ಪ್ರಸ್ತಾಪವಾಗಿತ್ತು. ದೇಣಿಗೆ ಹಣದಿಂದಲೇ ಧ್ವಜಸ್ತಂಭ ನಿರ್ಮಿಸಲಾಗಿದೆ‘ ಎಂದು ಶ್ಯಾಮಲಾ ಗೌಡ ಹೇಳಿದರು. 

ADVERTISEMENT

ಶ್ಯಾಮಲಾ ಅವರಿಗೆ ಒಂದು ಎಕರೆ ಜಮೀನಿದೆ ಪತಿ ತಿಮ್ಮಪ್ಪ ಗೌಡ ಎಲೆಕ್ಟ್ರಿಕ್ ಕೆಲಸಗಾರರು. ದಂಪತಿಯನ್ನು ಶಿಕ್ಷಣ ಇಲಾಖೆ ವತಿಯಿಂದ ಗೌರವಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.